Thursday, June 4, 2026
Homeಕರಾವಳಿಉಜಿರೆ: ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳಿದ ಭಾರತೀಯ ಸೇನೆಯ ವೀರ ಯೋಧರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

ಉಜಿರೆ: ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳಿದ ಭಾರತೀಯ ಸೇನೆಯ ವೀರ ಯೋಧರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

- Advertisement -
- Advertisement -

ಉಜಿರೆ: ಭಾರತೀಯ ಭೂಸೇನೆಯಲ್ಲಿ ಸೇವೆಗೈದು ನಿವೃತ್ತಿಹೊಂದಿ ತವರೂರಿಗೆ ಮರಳಿದ ಯೋಧರಾದ ಕನ್ಯಾಡಿಯ ಸುಧಾಕರ ಗೌಡ ಮತ್ತು ಇಂದಬೆಟ್ಟುವಿನ ಮೇಘಶ್ಯಾಮ ರವರಿಗೆ ಧರ್ಮಸ್ಥಳ ಹಾಗೂ ಉಜಿರೆ ಗ್ರಾಮಸ್ಥರ ವತಿಯಿಂದ ಅಭಿನಂದನೆ ಹಾಗೂ ಭವ್ಯ ಸ್ವಾಗತ ಕಾರ್ಯಕ್ರಮ ಇಂದು ಉಜಿರೆಯಲ್ಲಿ ನಡೆಯಿತು.

ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿ ಉಜಿರೆ ಪೇಟೆಯಿಂದ ಅವರ ಮನೆಯವರೆಗೆ ನಿವೃತ್ತ ಸೈನಿಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತಂದು, ಪ್ರಾರ್ಥನೆ ಸಲ್ಲಿಸಿ ಬಳಿಕ ಅವರ ಮನೆವರೆಗೂ ಮೆರವಣಿಗೆಯಲ್ಲಿ ತೆರಳಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಪಿ .ಹೆಚ್, ಧರ್ಮಸ್ಥಳ ಗ್ರಾ.ಪಂ ಸದಸ್ಯರಾದ ಶ್ರೀನಿವಾಸ ರಾವ್, ಸುಧಾಕರ ಗೌಡ, ನಿವೃತ್ತ ಸೈನಿಕ ಗೋಪಾಲಕೃಷ್ಣ ಕಾಂಚೋಡು, ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ತುಂಗಪ್ಪ ಗೌಡ, ಉಜಿರೆ ಉದ್ಯಮಿ ಪದ್ಮನಾಭ ಶೆಟ್ಟಿಗಾರ್, ಸುದರ್ಶನ್ ಕನ್ಯಾಡಿ, ನವೀನ್ ಕನ್ಯಾಡಿ, ರವಿ ಚಕ್ಕಿತ್ತಾಯ, ಸೈನಿಕ ಸುಧಾಕರ ಗೌಡ ರವರ ಮಾತಾಪಿತರಾದ ಸುಂದರ ಗೌಡ ಮತ್ತು ವಿಶಾಲಾಕ್ಷಿ ದಂಪತಿ ಹಾಗೂ ಕುಟುಂಬವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Latest News

error: Content is protected !!