Tuesday, May 7, 2024
Homeಕರಾವಳಿಜಗದೀಶ್ ಅಧಿಕಾರಿ ಕ್ಷಮೆ ಯಾಚಿಸದಿದ್ದರೆ ನಾವು 'ತಾಂಟಲು' ಸಿದ್ದ: ಪ್ರತಿಭಾ ಕುಳಾಯಿ

ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸದಿದ್ದರೆ ನಾವು ‘ತಾಂಟಲು’ ಸಿದ್ದ: ಪ್ರತಿಭಾ ಕುಳಾಯಿ

spot_img
- Advertisement -
- Advertisement -

ಮಂಗಳೂರು : ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ಬಗ್ಗೆ ಮತ್ತು ಸಮಸ್ತ ಬಿಲ್ಲವ ಸಮಾಜವನ್ನು ಕಡೆಗಣಿಸಿ ಮಾತನಾಡಿದ್ದರೆನ್ನಲಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿಯವರ ಹೇಳಿಕೆಯನ್ನು ಖಂಡಿಸಿರುವ ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ , ಈ ಬಗ್ಗೆ ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನಮ್ಮ ಗರಡಿಗೆ ಬಂದು ತಪ್ಪು ಕಾಣಿಕೆ ಹಾಕಿ ಸಮಾಜದ ಮುಂದೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅಧಿಕಾರಿಯವರೇ ಹೇಳುವಂತೆ ಅವರು ಸಿಕ್ಕಲ್ಲೆಲ್ಲ ನಾವು ತಾಂಟಲು ಸಿದ್ದರಿದ್ದೇವೆ” ಎಂದು ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

ಕೋಟಿ ಚೆನ್ನಯರು ತುಳುನಾಡಿನ ಉದ್ದಗಲಕ್ಕೂ ಗರಡಿ ನಿರ್ಮಿಸಿದ್ದು ಜನಮಾನಸದಲ್ಲಿ ಅಚ್ಚಳಿಯದೆ ಇಂದಿಗೂ ನೆಲೆನಿಂತಿದ್ದಾರೆ. ಅನೇಕ ಪವಾಡಗಳು ಕಾರಣಿಕ ಶಕ್ತಿಗಳು ನೆಲೆನಿಂತ ಗರಡಿಯಲ್ಲಿ ಇಂದಿಗೂ ನಡೆಯುತ್ತಿದ್ದು ತುಳುವರು ಧನ್ಯತಾಭಾವ ಹೊಂದಿದ್ದಾರೆ. ಹೀಗಿರುವಾಗ ಬಿಲ್ಲವ ಸಮಾಜವನ್ನು ಕಡೆಗಣಿಸಿ ಮಾತನಾಡಿದ ಜಗದೀಶ್ ಅಧಿಕಾರಿ ಹೇಳಿಕೆ ಖಂಡನೀಯ. ಮಾತೆತ್ತಿದರೆ ಹಿಂದೂ ಧರ್ಮ, ಹಿಂದೂ ದೈವ ದೇವರನ್ನು ಗುತ್ತಿಗೆ ಪಡೆದುಕೊಂಡಂತೆ ಮಾತಾಡುವ ಬಿಜೆಪಿ ನಾಯಕರ ನಾಲಗೆಯಲ್ಲಿ ಇಂತಹ ಮಾತು ಬರುತ್ತಿರುವುದು ಖೇದಕರ ಅಲ್ಲದೆ ಇನ್ನೇನು? ಎಂದು ಪ್ರತಿಭಾ ಪ್ರಶ್ನಿಸಿದರು.

ಕೋಟಿ ಚೆನ್ನಯರನ್ನು ಮತ್ತು ಬಿಲ್ಲವ ಸಮುದಾಯವನ್ನು ಅವಹೇಳನ ಮಾಡಿರುವ ಜಗದೀಶ್ ಅಧಿಕಾರಿ ಕೂಡಲೇ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಣ್ಣಯ್ಯ ಅಂಚನ್ ಮುಕ್ಕ, ಬಿಕೆ ತಾರಾನಾಥ್, ಸೂರ್ಯನಾರಾಯಣ ಹೊಸಬೆಟ್ಟು, ರಾಜೇಶ್ ಕುಳಾಯಿ, ಚರಣ್ ಸನಿಲ್, ಜಗದೀಶ್ ಅಮೀನ್ ಉಪಸ್ಥಿತರಿದ್ದರು.

ಏನಿದು ಪ್ರಕರಣ?
ವಾಲ್ಪಾಡಿಗುತ್ತುವಿನಲ್ಲಿ ನಡೆದ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಷಣ ಮಾಡುವ ವೇಳೆ, ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎನ್ನುವ ಜಗದೀಶ್‌ ಅಧಿಕಾರಿಯವರ ಮಾತುಗಳ ಆಡಿಯೋ ವೈರಲ್‌ ಆಗಿದೆ. ಈ ಕುರಿತು ಸ್ಪಷ್ಟನೆ ಕೇಳಲು ಬಿಲ್ಲವ ಸಮುದಾಯ ಮುಖಂಡರೊಬ್ಬರು ಜಗದೀಶ ಅಧಿಕಾರಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.

ಆದರೆ ಮಾತಿನ ನಂತರ ಕರೆ ಕಟ್ ಮಾಡದೆ, ತನ್ನ ಒಟ್ಟಿಗೆ ಇದ್ದವರ ಜೊತೆ ಜಗದೀಶ್‌ ಅಧಿಕಾರಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಫೋನ್‌ನಲ್ಲಿ ರೆಕಾರ್ಡ್‌ ಆಗಿದೆ. ತನ್ನೊಂದಿಗೆ ಇದ್ದವರೊಂದಿಗೆ ಮಾತನಾಡಿರುವ ಅಡಿಯೋ ದಾಖಲೆಯಲ್ಲಿ, ಬಿಲ್ಲವ ಸಮುದಾಯ ವಿರುದ್ಧ ಮಾತನಾಡಿರುವುದು, ಕೋಟಿ ಚೆನ್ನಯರ ಕಥೆಯನ್ನು ಅನ್ಯ ರೀತಿಯಲ್ಲಿ ಹೇಳಿರುವುದರಿಂದ ಬಿಲ್ಲವ ಸಮುದಾಯದವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!