Friday, June 5, 2026
Homeತಾಜಾ ಸುದ್ದಿಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಸ್ಪತ್ರೆಗೆ ದಾಖಲು;ಚಿಕಿತ್ಸೆ ಬಳಿಕ ಮತ್ತೆ...

ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಸ್ಪತ್ರೆಗೆ ದಾಖಲು;ಚಿಕಿತ್ಸೆ ಬಳಿಕ ಮತ್ತೆ ಎಸ್ ಐಟಿ ಕಚೇರಿಗೆ ಕರೆದೊಯ್ದ ಅಧಿಕಾರಿಗಳು

- Advertisement -
- Advertisement -

ಬೆಂಗಳೂರು : ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿ, ಸದ್ಯ SIT ಕಸ್ಟಡಿಯಲ್ಲಿರುವ ಹೆಚ್ ಡಿ ರೇವಣ್ಣ ಅವರಿಗೆ ಮಧ್ಯಾಹ್ನದ ಬಳಿಕ ಎದೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆ ತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇದೀಗ ಚಿಕಿತ್ಸೆ ಅಂತ್ಯವಾಗಿದ್ದು ಪೊಲೀಸರು ಅವರನ್ನು ಮತ್ತೆ ಎಸ್ ಐ ಟಿ ಕಚೇರಿಗೆ ಕರೆದೊಯ್ದಿದ್ದಾರೆ.

ವೈದ್ಯರು ಸುದೀರ್ಘವಾಗಿ 2 ಗಂಟೆಗಳ ಕಾಲ ಅವರಿಗೆ ಚಿಕಿತ್ಸೆ ನೀಡಿದರು.ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಎಸ್ಐಟಿ ಎಸ್ ಪಿ ಸುಮನ್ ಡಿ. ಪನ್ನೇಕರ್ ಅವರು ರೇವಣ್ಣ ಅವರ ಆರೋಗ್ಯದ ಕುರಿತಂತೆ ಆಸ್ಪತ್ರೆಯ ವೈದ್ಯರಿಂದ ಮಾಹಿತಿಯನ್ನು ಪಡೆದುಕೊಂಡರು.ಬಳಿಕ ಪೊಲೀಸರು ಮತ್ತೆ ಅವರನ್ನು ಎಸ್ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

- Advertisement -

Latest News

error: Content is protected !!