Tuesday, July 14, 2026
Homeತಾಜಾ ಸುದ್ದಿಬೆಳ್ತಂಗಡಿಯ ಮರೋಡಿಯಲ್ಲಿ ಹಸುವನ್ನು ಬಲಿ ಪಡೆದ ಚಿರತೆ: ಮುಂಡಾಜೆಯ ಕಾಪುವಿನಲ್ಲೂ ಪ್ರತ್ಯಕ್ಷವಾದ ಚೀತಾ...

ಬೆಳ್ತಂಗಡಿಯ ಮರೋಡಿಯಲ್ಲಿ ಹಸುವನ್ನು ಬಲಿ ಪಡೆದ ಚಿರತೆ: ಮುಂಡಾಜೆಯ ಕಾಪುವಿನಲ್ಲೂ ಪ್ರತ್ಯಕ್ಷವಾದ ಚೀತಾ…

- Advertisement -
- Advertisement -

ಬೆಳ್ತಂಗಡಿ : ಬೆಳ್ತಂಗಡಿಯ ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆಯೊಂದು ಹಸುವನ್ನು ಬಲಿ ಪಡೆದಿದೆ. ದಿವಾಕರ ಹೆಗ್ಡೆ ಅವರ ಹಸುವಿನ ಮೇಲೆ ದಾಳಿ ಮಾಡಿದ ಚಿರತ ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ ಹಿಂದೆ ಹರೀಶ್‌ ಹೆಗ್ಡೆ ಅವರ ಕರುವೊಂದನ್ನು ಚಿರತೆಗೆ ಬಲಿಯಾಗಿತ್ತು.

ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಸುದ್ದಿ ಮುಟ್ಟಿಸಿದ್ದು, ತಕ್ಷಣ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.ಮೂರು ದಿನಗಳ ಹಿಂದೆ ಕುತ್ಲೂರಿನ ಬಜಿಲಪಾದೆಯಲ್ಲಿ ಚಿರತೆಯೊಂದು ಪತ್ತೆಯಾಗಿತ್ತು. ಇನ್ನು ನಿನ್ನೆ ರಾತ್ರಿ ಮಂಡಾಜೆಯ ಕಾಪು ಪ್ರದೇಶದಲ್ಲೂ ಚಿರತೆ ಕಾಣಿಸಿಕೊಂಡಿದೆ. ಅದೇ ಚಿರತೆ ಮರೋಡಿಯಲ್ಲಿಯೂ ದಾಳಿ  ಮಾಡಿರುವ ಶಂಕೆಯಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ, ವೇಣೂರು ವಲಯ ಅರಣಾಧಿಕಾರಿ ಮಹೀಂ ಜನ್‌ ಬಜಿಲಪಾದೆಯಲ್ಲಿ ಬೋನು ಇಟ್ಟಿದ್ದೇವೆ. ನಡುಚ್ಚೂರು ಪರಿಸರದಲ್ಲಿಯೂ ಬೋನು ಇಟ್ಟು, ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!