Friday, June 5, 2026
Homeಕರಾವಳಿಮಹಿಳೆಗೆ ಜೀವಬೆದರಿಕೆ ಒಡ್ಡಿದ ಯುವಕ!..ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು.

ಮಹಿಳೆಗೆ ಜೀವಬೆದರಿಕೆ ಒಡ್ಡಿದ ಯುವಕ!..ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು.

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಎಂಬಲ್ಲಿನ ಎಂ.ಎಂ. ಕಾಂಪ್ಲೆಕ್ಸ್ ನಲ್ಲಿ ಮಹಿಳೆಯನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದುದಲ್ಲದೆ ಮಹಿಳೆ ಹಾಗು ಮಕ್ಕಳಿಗೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ವರದಿಯಾಗಿದೆ.

ನ್ಯಾಯತರ್ಪು ಗ್ರಾಮದ ಎಂ.ಎಂ.ಕಾಂಪ್ಲೆಕ್ಸ್ ನಲ್ಲಿ ವಾಸವಾಗಿರುವ ಹಾಜಿರ ಎಂಬ ಮಹಿಳೆಗೆ ಮನೆ ಬಾಡಿಗೆ ಪಾವತಿಸದ ನೆಪವೊಡ್ಡಿ ಉಸ್ಮಾನ್ ಎಂಬವರ ಮಗ ಪಿ. ಮಹಮ್ಮದ್ ಜೀವಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

- Advertisement -

Latest News

error: Content is protected !!