Wednesday, June 24, 2026
Homeಮಹಾನ್ಯೂಸ್ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ನೂತನ ಆಡಳಿತ ಮೊಕ್ತೇಸರರಾಗಿ ಚಂದ್ರಶೇಖರ್ ಬೆಳ್ಚಡ

ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ನೂತನ ಆಡಳಿತ ಮೊಕ್ತೇಸರರಾಗಿ ಚಂದ್ರಶೇಖರ್ ಬೆಳ್ಚಡ

- Advertisement -
- Advertisement -

ಮುಂಬಯಿ : ಈ ವರ್ಷ ಬ್ರಹ್ಮಕಲಶೋತ್ಸವ ನಡೆಯಲಿರುವ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಮಂಗಳೂರು ಇದರ ಆಡಳಿತ ಮೊಕ್ತೇಸರರಾಗಿ ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಬೆಳ್ಚಡ , ಕಟೀಲು ಇವರು ಆಯ್ಕೆಯಾಗಿದ್ದಾರೆ. ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಪಂದಿಬೆಟ್ಟುವಿನ ಉದ್ಯಮಿ ಹಾಗೂ ಸಮಾಜ ಸೇವಕ  ವಿಶ್ವನಾಥ ಬೆಳ್ಚಡ, ಮುಂದಿಬೆಟ್ಟು, ಉಡುಪಿ ಇವರು ಆಯ್ಕೆಯಾಗಿದ್ದಾರೆ.

ಇದನ್ನು ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ವಾಮನ್ ಇಡ್ಯಾ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಮತ್ತು ಅನುವಂಶಿಕ ಮುಕ್ತೇಸರರೂ ಆಗಿರುವ ಶ್ರೀನಿವಾಸ (ಅಪ್ಪು ಪೂಜಾರಿ) ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದಲ್ಲಿ ಮಾರ್ಚ್ 4 ರಿಂದ 8 ರ ತನಕ ಬ್ರಹ್ಮಕಲಶ,  ಏಪ್ರಿಲ್ 10 ರಂದು ನಡಾವಳಿ ಮಹೋತ್ಸವ ಹಾಗು ಏಪ್ರಿಲ್ 11 ರಿಂದ ಒಂದು ವಾರಗಳ ಕಾಲ ಭರಣಿ ಮಹೋತ್ಸವ ನಡೆಯಲಿದ್ದು ನೂತನ ಆಡಳಿತ ಮುಕ್ತೇಸರ ಹಾಗೂ ಉಪಾಧ್ಯಕ್ಷರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನಡೆಯಲಿವೆ ಎಂದು ಎಳೂರ ಗುರಿಕಾರರು,ದೇವಸ್ಥಾನದ ಟ್ರಸ್ಟಿಗಳು ಭರವಸೆ ವ್ಯಕ್ತಪಡಿಸಿ ನೂತನ ಆಡಳಿತ ಮೊಕ್ತೇಸರರಿಗೆ ಶುಭ ಹಾರೈಸಿದ್ದಾರೆ.

- Advertisement -

Latest News

error: Content is protected !!