ಮಂಗಳೂರು; ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ ವಾರಂಟ್ ಆರೋಪಿಯನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಅಶೋಕನಗರದ ಬಿರಾ ಪೂಜಾರಿ ಕಂಪೌಂಡ್ ನಿವಾಸಿ ಸುಹಾನ್ @ ಸೋನು (33) ಬಂಧಿತ.
ಸುಹಾನ್ ವಿರುದ್ದ ದಾಖಲಾಗಿದ್ದ ಪ್ರಕರಣಗಳು:
1) ಉರ್ವಾ ಪೊಲೀಸ್ ಠಾಣಾ ಅ.ಕ್ರ. 62/2016, ಕಲಂ. 399, 120(B) ಐಪಿಸಿ
2 ಉರ್ವಾ ಪೊಲೀಸ್ ಠಾಣಾ ಅ.ಕ್ರ 126/2017, ಕಲಂ 120(B), 399, 402, 188 ಐಪಿಸಿ
3) ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ, 32/2020 ಕಲಂ. 143 147 148 504 506 323 324 ಜೊತೆಗೆ 149 ಐಪಿಸಿ.
ಸುಹಾನ್ ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣೆ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಇತನ ವಿರುದ್ದ ಉರ್ವಾ ಪೊಲೀಸ್ ಠಾಣಾ ಪ್ರಕರಣದಲ್ಲಿ ನ್ಯಾಯಾಲಯವು ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು.
ಆರೋಪಿಯನ್ನು ದಿನಾಂಕ 29-03-2026 ರಂದು ಮುಂಬೈ ನಲ್ಲಿ ಉರ್ವಾ ಪೊಲೀಸ್ ಠಾಣಾ ಎಎಸ್ಐ ಲಕ್ಷ್ಮಣ್ ಮತ್ತು ಸಿಬ್ಬಂದಿ ಪತ್ತೆಮಾಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿರುತ್ತದೆ.


