Sunday, August 30, 2026
Homeಕರಾವಳಿಮಂಗಳೂರುಮಂಗಳೂರು: ಮ್ಯಾಟ್ರಿಮೊನಿ ಮೂಲಕ ಹೆಣ್ಮಕ್ಕಳಿಗೆ ವಂಚನೆ: ಆರೋಪಿಯನ್ನು ಬಂಧಿಸಿದ ಪೊಲೀಸರು

ಮಂಗಳೂರು: ಮ್ಯಾಟ್ರಿಮೊನಿ ಮೂಲಕ ಹೆಣ್ಮಕ್ಕಳಿಗೆ ವಂಚನೆ: ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು: ಮ್ಯಾಟ್ರಿಮೊನಿ ಮೂಲಕ ಹೆಣ್ಮಕ್ಕಳಿಗೆ ವಂಚಿಸುತ್ತಿದ್ದ ಆರೋಪಿಯನ್ನು ಕಾವೂರು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿತನಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಬಂಧಿತ ಆರೋಪಿ.

ಆರೋಪಿ ಸುಶಾಂತ್ ಮಹಿಳೆಯೊಬ್ಬರಿಗೆ ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿದ್ದ. ಮಹಿಳೆಯನ್ನು ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈ ನಲ್ಲಿ 02/02/2025 ರಲ್ಲಿ ಮದುವೆಯಾಗಿದ್ದಲ್ಲದೆ ನಂಬಿಸಿ ಹಂತ ಹಂತವಾಗಿ 6,60,000/- ಹಣವನ್ನು ಪಡೆದುಕೊಂಡು ಮೋಸ ಮಾಡುವ ಉದ್ದೇಶದಿಂದ ದಿನಾಂಕ 15/11/2025 ರಂದು  ನಾಪತ್ತೆ ಯಾಗಿದ್ದ. ನಂತರದ ದಿನಗಳಲ್ಲಿ ಮಹಿಳೆ ಅನುಮಾನಗೊಂಡ ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಸುಮಾರು ಕಡೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಮೋಸ ಮಾಡಿರುವ  ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದ ಮೇರೆಗೆ ಪಿ ನೊಂದ ಮಹಿಳೆಯು ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

 ಅದರಂತೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು  ದಿನಾಂಕ:05/02/2026 ರಂದು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆ ನಡೆಸಿದಾಗ ಆತ ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಈ ಮೊದಲು 2021 ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುತ್ತಾನೆ. ಹಾಗೂ ಉಡುಪಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ  ಹಣ ಪಡೆದುಕೊಂಡಿರುತ್ತಾನೆ, ಮುಂಬೈನ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುತ್ತಾನೆ. ಬೆಂಗಳೂರಿನಲ್ಲಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುತ್ತಾನೆ ಕಾರ್ಕಳದ ಒಂದು ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.

ಪ್ರಕರಣದಲ್ಲಿ  ಆರೋಪಿತ ಸುಶಾಂತ್ ಪೂಜಾರಿ ಯವನೊಂದಿಗೆ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನು ದೂರುದಾರ ಮಹಿಳೆ ಮತ್ತು ಕುಟುಂಬದವರಿಗೆ ನಂಬಿಸುವ ಉದ್ದೇಶದಿಂದ ಆರೋಪಿ ಸುಶಾಂತ್ ನನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿ  ಆರೋಪಿ  ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು ಮದುವೆ ನಡೆಸಿದವರಾಗಿರುತ್ತಾನೆ. ಸದ್ಯ ಆತನನ್ನು ಕೂಡ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿರುತ್ತದೆ. 

ಆರೋಪಿ ಸುಶಾಂತ್ ಪೂಜಾರಿ ವಿರುದ್ದ ಮಂಗಳೂರು ಊರ್ವ ಪೊಲೀಸ್ ಠಾಣಾಅ.ಕ್ರ: 202/2017 ಕಲಂ: 406, 420 ಐಪಿಸಿ,  ಉಡುಪಿ ಜಿಲ್ಲೆಯ  ಕೋಟಾ ಪೊಲೀಸ್ ಠಾಣಾ ಅ.ಕ್ರ: 132/2022  ಕಲಂ: 379 ಐಪಿಸಿ  ಮತ್ತು ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣಾ ಅ.ಕ್ರ:354/2022 ಕಲಂ:336(ಎ), 370, 370(4), 376(2),(ಎನ್) 342, ಜೊತೆಗೆ 34 ಐಪಿಸಿ ಕಲಂ:3,4,5 ಇಮ್ಮೋರಲ್ ಟ್ರಾಫಿಕಿಂಗ್ ಆ್ಯಕ್ಟ್, ಕಲಂ:4,8,12 ಪೋಕ್ಸೋ ಕಾಯ್ದೆ ರಂತೆ ಪ್ರಕರಣಗಳು ದಾಖಲಾಗಿರುತ್ತದೆ.

- Advertisement -

Latest News

error: Content is protected !!