ಬೆಳ್ತಂಗಡಿ : ಎಸ್.ಐ.ಟಿ ಅಧಿಕಾರಿಗಳಿಗೆ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿರುವುದಾಗಿ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿ ಲಭ್ಯವಾಗಿದ್ದು, ಇದು ಎಸ್.ಐ.ಟಿ ಗೆ ಧರ್ಮಸ್ಥಳದ ಮೇಲೆ ಷಡ್ಯಂತ್ರ ರೂಪಿಸಿರುವುದಕ್ಕೆ ಬಲವಾದ ಕುರುಹಾಗಿದೆ.
ಉಜಿರೆ ತಿಮರೋಡಿ ಮಹೇಶ್ ಶೆಟ್ಟಿ ಮನೆ ಮೇಲೆ ಎಸ್.ಐ.ಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಆ.26 ರಂದು ದಾಳಿ ಮಾಡಿ ಶೋಧ ನಡೆಸಿದಾಗ ಧರ್ಮಸ್ಥಳ ಗ್ರಾಮದ ನೇತ್ರಾವತಿ ಪ್ರದೇಶ, ಕಲ್ಲೇರಿ ಪ್ರದೇಶ, ಕನ್ಯಾಡಿ ದ್ವಾರಕಾಶ್ರಮ ಪ್ರದೇಶಗಳಲ್ಲಿ ಮೃತದೇಹ ಹಾಕಿದ್ದಾಗಿ ತೋರಿಸಿದ ಜಾಗಗಳ ‘ಬ್ಲೂ ಪ್ರಿಂಟ್’ ತಯಾರಿಸಿರುವ ಚಾರ್ಟ್ ಪತ್ತೆಯಾಗಿದ್ದು ಅದನ್ನು ತನಿಖೆಗಾಗಿ ಅಧಿಕಾರಿಗಳು ವಶಪಡಿಸಿಕೊಂಡು ಒಂದು ತಂಡ ತನಿಖೆ ಚುರುಕುಗೊಳಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್.ಟಿ ಗ್ಯಾಂಗ್ ಈ ಮ್ಯಾಪ್ ತಯಾರಿಸಿ ಆರೋಪಿ ಚಿನ್ನಯ್ಯನಿಗೆ ಪ್ರತಿನಿತ್ಯ ಪೊಲೀಸರಿಗೆ ಹೇಗೆ ಯಾವ ಪಾಯಿಂಟ್ ನಲ್ಲಿ ಗುಂಡಿ ಅಗೆಯಲು ತೋರಿಸಬೇಕು ಎಂದು ತರಬೇತಿಯನ್ನು ಈ’ ಬ್ಲೂ ಪ್ರಿಂಟ್’ ಚಾರ್ಟ್ ಮೂಲಕ ತೋರಿಸಿ ಚಿನ್ನಯ್ಯನನ್ನು ತಯಾರು ಮಾಡಿ ಕಳುಹಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಒಂದು ವರ್ಷದ ಹಿಂದೆ ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಗ್ಯಾಂಗ್ ಚಿನ್ನಯ್ಯನನ್ನು ನೇತ್ರಾವತಿ ಸೇರಿದಂತೆ ಹಲವೆಡೆ ಮೃತದೇಹ ಹೂತು ಹಾಕಿದ ಆರೋಪ ಮಾಡಿದ ಸ್ಥಳಗಳಿಗೆ ರಾತ್ರಿ ಸಮಯದಲ್ಲಿ ಕರೆದುಕೊಂಡು ಹೋಗಿ ಪಕ್ಕದಲ್ಲಿರುವ ಮರಗಳನ್ನು ಗುರುತು ಮಾಡಿಕೊಂಡು ಬಂದಿದ್ದರು ಬಳಿಕ ಈ ‘ಬ್ಲೂ ಪ್ರಿಂಟ್’ ಚಾರ್ಟ್ ತಯಾರಿಸಿ ತರಬೇತಿ ನೀಡಿದ್ದಾರೆ ಎನ್ನಲಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ತನಿಖೆಗೆ ಈ ‘ಬ್ಲೂ ಪ್ರಿಂಟ್’ ಚಾರ್ಟ್ ಮಹತ್ವರ ಸಾಕ್ಷಿಯಾಗಿ ಪ್ರಕರಣ ತಿರುವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.


