Monday, June 8, 2026
HomeUncategorizedಬೆಳ್ತಂಗಡಿ:ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಹಾಗೂ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ!

ಬೆಳ್ತಂಗಡಿ:ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಹಾಗೂ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ!

- Advertisement -
- Advertisement -

ಬೆಳ್ತಂಗಡಿ : ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಮುಗೇರಡ್ಕ ಇದರ ವತಿಯಿಂದ ಹಾಗೂ ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಇದರ ಸಹಬಾಗಿತ್ವದಲ್ಲಿ ಅಲೆಕ್ಕಿ ಪರಿಸರದಲ್ಲಿ ವನಮಹೋತ್ಸವ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಂದರು ಪಂಚಾಯತ್ನಾ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಜನಾರ್ಧನ ಗೌಡ ಪುಯಿಲ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಉದಯ ಭಟ್ ಕೊಳಬ್ಬೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಉಪ ವಲಯ ಅರಣ್ಯಧಿಕಾರಿ, ಬಂದರು ಶಾಖೆಯ ಶ್ರೀ ಆರ್ ಎಸ್ ಪಾಟೀಲ್,
ಅಧ್ಯಕ್ಷರು ಸಿ ಎ ಬ್ಯಾಂಕ್ ಅಧ್ಯಕ್ಷರು ಪದ್ಮುಂಜಾದ ಶ್ರೀ ರಕ್ಷಿತ್ ಪಾನೇಕ್ಕರ್, ಅರಣ್ಯ ರಕ್ಷಕರು ಬಂದರು ಗಸ್ತು ಶ್ರೀ ಕೆ ಏನ್ ಜಗಧೀಶ, ಬಂದರು ಪಂಚಾಯತ್ ಉಪಾಧ್ಯಕ್ಷರು ಶ್ರೀ ಗಂಗಾಧರ ಪೂಜಾರಿ, ಬಂದರು ಪಂಚಾಯತ್ ಸದಸ್ಯರು ಶ್ರೀ ಬಾಲಕೃಷ್ಣ ಗೌಡ ಮುಗೇರಡ್ಕ, ಮತ್ತು ಸದಸ್ಯರು ಸಿ ಎ ಬ್ಯಾಂಕ್ ಪದ್ಮುಂಜರಾದ ಶ್ರೀಮತಿ ಶೀಲವತಿ ಮುಗೇರಡ್ಕ, ನಿವೃತ್ತ ಪೊಲೀಸ್ ಅಧಿಕಾರಿಯಾದ ಶ್ರೀ ಬಾಬು ಗೌಡ ಮುಗೇರಡ್ಕ, ಮಹಿಳಾ ಹಾಲು ಸೊಸೈಟಿಯ ಅಧ್ಯಕ್ಷರು ಶ್ರೀಮತಿ ಮಮತಾ ಕೆಲೆಂಜಿಂರು ಹಾಗೂ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ನಾ ಅಧ್ಯಕ್ಷರಾದ ಶ್ರೀ ಪ್ರವೀಣ್ ಗೌಡ ಮತ್ತಿಲರು ಹಾಗೂ ಕ್ಲಬ್ನಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅರಣ್ಯ ಅಧಿಕಾರಿಗಳ ಸಲಹೆಯಂತೆ ಹಲವು ಜಾತಿಯ ಅಂದಾಜು 250 ಗಿಡಗಳನ್ನು ಅಲೆಕ್ಕಿ ಮುಗೇರಡ್ಕ ಎರ್ಮಲ ಪರಿಸರದಲ್ಲಿ ನೆಡಲಾಯಿತು.

- Advertisement -

Latest News

error: Content is protected !!