Thursday, May 16, 2024
Homeತಾಜಾ ಸುದ್ದಿದರ್ಶನ್ ಹೇಳಿದ ಪುಡಾಂಗು ಪದ ಆಗ್ತಿದೆ ಸಿಕ್ಕಾಪಟ್ಟೆ ವೈರಲ್: ಅಷ್ಟಕ್ಕೂ ಪುಂಡಾಗ್ ಅಂದ್ರೇನು?

ದರ್ಶನ್ ಹೇಳಿದ ಪುಡಾಂಗು ಪದ ಆಗ್ತಿದೆ ಸಿಕ್ಕಾಪಟ್ಟೆ ವೈರಲ್: ಅಷ್ಟಕ್ಕೂ ಪುಂಡಾಗ್ ಅಂದ್ರೇನು?

spot_img
- Advertisement -
- Advertisement -

ಬೆಂಗಳೂರು: ನಟ ದರ್ಶನ್ ನಿರ್ದೇಶಕ ಪ್ರೇಮ್ ವಿರುದ್ಧ ಬಳಸಿದ ಪುಡಾಂಗು ಎಂಬ ಪದ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊನ್ನೆ  ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್​​ನಲ್ಲಿ ತಮ್ಮ ವಿರುದ್ಧ ಕೇಳಿ ಬಂದ ಹಲವು ಆರೋಪಗಳಿಗೆ ವಿವರಣೆ ನೀಡುವ ಪ್ರಯತ್ನ ಮಾಡಿದರು. ಈ ವೇಳೆ ಪ್ರೇಮ್ ಸಿನಿಮಾಗೆ 100 ದಿನಗಳ ಕಾಲ ಕೆಲಸ ಮಾಡಿದ್ದೆ ಎಂದು ಚರ್ಚೆಯಾಯ್ತು ಎಂದು ಹೇಳಿದರು. ಈ ವೇಳೆ ಪ್ರೇಮ್ ಏನು ದೊಡ್ಡ ಪುಡಾಂಗಾ..? ಎಂದಿದ್ದರು.

ದರ್ಶನ್ ಉಲ್ಲೇಖಿಸಿದ ಪುಡಾಂಗು ಪದದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ ಎನ್ನುವುದು ಸುಳ್ಳಲ್ಲ. ಹಾಗೆ ನೋಡಿದ್ರೆ ಕನ್ನಡದಲ್ಲಿ ಪುಡಾಂಗ್ ಪದ ಅಧಿಕೃತವಾಗಿ ಬಳಕೆಯಲ್ಲಿಲ್ಲ.. ಹಾಗಂತ ಇದು ಕೆಟ್ಟ ಪದವೂ ಅಲ್ಲ. ಯುವಕರು ಒಬ್ಬರನ್ನೊಬ್ಬರು ಕಾಲೆಳೆಯುವ ಪದವಾಗಿ ಈ ಪದ ಹುಟ್ಟಿಕೊಂಡಿರಬಹುದು.. ನೀನೇನು ದೊಡ್ಡ ಪುಡಾಂಗಾ..? ಎಂದು ಯುವಕರು ಬಳಸುವುದು ಚಾಲ್ತಿಯಲ್ಲಿದೆ.. ಈ ಪದದ ಅರ್ಥ ನೀನೇನು ದೊಡ್ಡ ಗಂಡಸಾ..? ಸಾಧಕನಾ..? ಪವರ್ ಫುಲ್ ವ್ಯಕ್ತಿಯಾ ಎಂಬ ಅರ್ಥವನ್ನ ಕಲ್ಪಿಸುತ್ತದೆ. ಅಲ್ಲದೇ ಪುಡಾಂಗು ಅಂದ್ರೆ ದಾದಾ ( ಗ್ಯಾಂಗ್ ಲೀಡರ್ ) ಎಂಬ ಅರ್ಥ ದಲ್ಲೂ ಬಳಸಲಾಗುತ್ತೆ.

ಕೆಲವರು ಈ ಪದ ತಮಿಳಿನಿಂದ ಕನ್ನಡಕ್ಕೆ ಬಂದ ಪದವಿರಬಹುದು ಎಂದು ಹೇಳುವುದೂ ಇದೆ. ತಮಿಳಿನಿಂದ ಮಚ್ಚಾ ಎಂಬ ಪದ ಕನ್ನಡಕ್ಕೆ ಹೊಂದಿಕೊಂಡಂತೆ ಪುಡಾಂಗ್ ಪದವೂ ಸಹ ಬಳಕೆಯಾಗಿರಬಹುದು ಎಂದು ಹೇಳಲಾಗುತ್ತದೆ. ಪುಡಾಂಗು ಪದದ ರೀತಿಯೇ ಹಲವು ಪದಗಳನ್ನು ಯುವ ಸಮುದಾಯ ಆಗಾಗ್ಗೆ ಬಳಕೆ ಮಾಡುವುದನ್ನು ಕಾಣಬಹುದಾಗಿದೆ. ಚೀನಾದ ಶಾಂಘೈನಲ್ಲಿ pudong ಹೆಸರಿನ ಒಂದು ಜಿಲ್ಲೆಯೂ ಇದ್ದು ಇದು 50 ಲಕ್ಷ ಜನಸಂಖ್ಯೆಯನ್ನ ಹೊಂದಿದೆ.

- Advertisement -
spot_img

Latest News

error: Content is protected !!