Monday, June 8, 2026
HomeUncategorizedಬೈಕಂಪಾಡಿಯಲ್ಲಿ ಗುಡ್ಡ ಕುಸಿತ: ₹ 15 ಲಕ್ಷಕ್ಕೂ ಅಧಿಕ ನಷ್ಟ!!

ಬೈಕಂಪಾಡಿಯಲ್ಲಿ ಗುಡ್ಡ ಕುಸಿತ: ₹ 15 ಲಕ್ಷಕ್ಕೂ ಅಧಿಕ ನಷ್ಟ!!

- Advertisement -
- Advertisement -

ಮಂಗಳೂರು : ಆದಿಶಕ್ತಿ ಇಂಟರ್‌ಲಾಕ್ ಇಂಡಸ್ಟ್ರಿಗೆ ಹೊಂದಿಕೊಂಡಿರುವ ಮಣ್ಣಿನ ಗುಡ್ಡ ಸಹಿತ ಕಾಂಕ್ರಿಟ್‌ ತುಂಡುಗಳು ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ.

ಗುಡ್ಡ ಕುಸಿತದಿಂದ ಕೈಗಾರಿಕಾ ಸ್ಥಳದಲ್ಲಿದ್ದ 2,000 ಬ್ಯಾಗ್ ಸಿಮೆಂಟ್, 50 ಲೋಡ್‌ನಷ್ಟು ಮರಳು ಮಣ್ಣಿನಡಿ ಸಿಲುಕಿದ್ದು, ಇಂಟರ್ ಲಾಕ್ ಗಳಿಗೆ ಹಾನಿಯಾಗಿದೆ. ಸದ್ಯ ₹ 15 ಲಕ್ಷಕ್ಕೂ ಅಧಿಕ ನಷ್ಟವಾಗಿರುವುದನ್ನು ಅಂದಾಜಿಸಲಾಗಿದ್ದು, ಇದೇ ಜಾಗದಲ್ಲಿ ಮತ್ತಷ್ಟು ಗುಡ್ಡ ಕುಸಿಯುವ ಅಪಾಯ ಇದೆ ಎನ್ನಲಾಗಿದೆ.

ಗುಡ್ಡ ಕುಸಿದ ಜಾಗದಲ್ಲಿ ಮತ್ತೊಂದು ಬೃಹತ್ ಗಾತ್ರದ ಬಂಡೆ ಬೀಳುವ ಹಂತದಲ್ಲಿದೆ. ಗುಡ್ಡದ ಮೇಲ್ಭಾಗದಲ್ಲಿರುವ ಕಟ್ಟಡವೂ ಅಪಾಯದಲ್ಲಿದೆ ಎಂದು ಆದಿಶಕ್ತಿ ಇಂಟರ್‌ಲಾಕ್ ಇಂಡಸ್ಟ್ರಿ ಮಾಲೀಕ ಗೋಪಾಲ್ ಬಿ.ವಿ ಪ್ರತಿಕ್ರಿಯಿಸಿದ್ದಾರೆ . ಇಂಟರ್‌ಲಾಕ್ ಇಂಡಸ್ಟ್ರಿಯ ಸುತ್ತಲೂ ಗುಡ್ಡ ಕುಸಿದ ಮಣ್ಣ ಹರಡಿಕೊಂಡಿದೆ.

- Advertisement -

Latest News

error: Content is protected !!