- Advertisement -
![]()
- Advertisement -
ಉಡುಪಿ : ಹೆಜ್ಜೇನು ದಾಳಿ ಮಾಡಿದ ಪರಿಣಾಮ ಮೂವರಿಗೆ ಗಾಯಗಳಾಗಿ ಅದರಲ್ಲಿ ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಉಡುಪಿಯ ಹೆರ್ಗ ಶೆಟ್ಟಿಬೆಟ್ಟು ಎಂಬಲ್ಲಿ ನಡೆದಿದೆ.
ಶೆಟ್ಟಿಬೆಟ್ಟು ನಿವಾಸಿ ಉದಯ ದೇವಾಡಿಗ ಹೆಜ್ಜೇನು ದಾಳಿಯಿಂದ ಗಂಭೀರವಾಗಿ ಗಾಯಗೊಂಡವರು. ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉದಯ ದೇವಾಡಿಗ ಸ್ಥಳೀಯವಾಗಿ ನಡೆಯುವ ಅಯ್ಯಪ್ಪ ಆರಾಧನಾ ಶಿಬಿರಕ್ಕೆ ಗುರುವಾರ ಹೋಗುತ್ತಿರುವಾಗ ನೂರಾರು ಸಂಖ್ಯೆಯಲ್ಲಿ ಹೆಜ್ಜೇನು ಏಕಕಾಲಕ್ಕೆ ದಾಳಿ ನಡೆಸಿತ್ತೆನ್ನಲಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಉದಯ ಮನೆಯ ಗುಡ್ಡ ಮೇಲೆ ಓಡಿ ಹೋಗಿದ್ದಾರೆ . ಅಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ಅವರು ಪ್ರಜ್ಞೆ ತಪ್ಪಿಬಿದ್ದಿದ್ದರು. ನಂತರ ಸ್ಥಳೀಯರು ಮತ್ತು ಕುಟುಂಬಸ್ಥರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಜೊತೆಗೆ ದಾರಿಯಲ್ಲಿ ಹೋಗುವ ಗ್ಯಾಬ್ರಿಯಲ್ ಮತ್ತು ಸದಾಶಿವ ಎಂಬವರ ಮೇಲೂ ಜೇನು ದಾಳಿ ಮಾಡಿದೆ. ಇವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ.
- Advertisement -


