Sunday, May 5, 2024
Homeಇತರಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ ಬಂಟ್ವಾಳದ ಅರ್ಚಕ ರವಿಶಂಕರ್ ಭಟ್ ಮೃತದೇಹ ಪತ್ತೆ

ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ ಬಂಟ್ವಾಳದ ಅರ್ಚಕ ರವಿಶಂಕರ್ ಭಟ್ ಮೃತದೇಹ ಪತ್ತೆ

spot_img
- Advertisement -
- Advertisement -

ಮಡಿಕೇರಿ : ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ನಾಪತ್ತೆಯಾಗಿದ್ದಂತ ಐವರಿಲ್ಲಿ, ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಹಾಗೂ ಅವರ ಅಣ್ಣ ಅವರ ಮೃತದೇಹ ಪತ್ತೆಯಾಗಿತ್ತು. ಈ ಬಳಿಕ ಇಂದು ಮತ್ತೊಂದು ಮೃತದೇಹ ಬ್ರಹ್ಮಗಿರಿ ಬೆಟ್ಟದಿಂದ ಒಂದು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಇದೀಗ ಇಂತಹ ಮೃತದೇಹದ ಗುರುತು ಪತ್ತೆಯಾಗಿದ್ದು, ಸಹಾಯಕ ಅರ್ಚಕ ರವಿಕಿರಣ್ ಮೃತದೇಹ ಎಂಬುದಾಗಿ ತಿಳಿದು ಬಂದಿದೆ.

ಎಡಬಿಡದೇ ಸುರಿಯುತ್ತಿರುವ ಮಳೆಯ ಅಡ್ಡಿಯ ನಡುವೆ ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ನಾಪತ್ತೆಯಾಗಿದ್ದಂತ ತಲಕಾವೇರಿ ಪ್ರಾಧಾನ ಅರ್ಚಕರ ಮನೆಯಲ್ಲಿದ್ದಂತ ಮೂವರಿಗೆ ಕಾರ್ಯಾಚರಣೆ ನಡೆಸಲಾಗಿತ್ತು. ಇಂತಹ ಕಾರ್ಯಾಚರಣೆ ವೇಳೆ ಬ್ರಹ್ಮಗಿರಿ ಬೆಟ್ಟದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮೂರನೇ ಮೃತದೇಹವೊಂದು ಇಂದು ಪತ್ತೆಯಾಗಿತ್ತು.

ಪತ್ತೆಯಾದಂತ ಮೃತದೇಹ ಯಾರದ್ದೆಂದು ಆರಂಭದಲ್ಲಿ ಗುರುತು ಪತ್ತೆಯಾಗಿರಲಿಲ್ಲ. ಇದೀಗ ಪತ್ತೆಯಾದ ಮೃತದೇಹ ತಲಕಾವೇರಿ ಪ್ರಧಾನ ಅರ್ಚಕರ ನಾರಾಯಣ ಆಚಾರ್ ಮನೆಯಲ್ಲಿ ಇದ್ದಂತ ಸಹಾಯಕ ರವಿಕಿರಣ್ ಅವರ ಮೃತದೇಹ ಎಂಬುದಾಗಿ ಗುರುತಿಸಲಾಗಿದೆ. ಮೃತ ರವಿಕಿರಣ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಾಗಿದ್ದರು. ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಮನೆಯಲ್ಲಿ ವಾಸವಿದ್ದರು. ಇನ್ನುಳಿದಂತೆ ನಾಪತ್ತೆಯಾಗಿರುವ ಇಬ್ಬರ ಪತ್ತೆಗೆ ನಾಳೆ ಶೋಧಕಾರ್ಯ ಮುಂದುವರೆಯಲಿದೆ.

- Advertisement -
spot_img

Latest News

error: Content is protected !!