Monday, June 8, 2026
HomeUncategorizedಸುಳ್ಯ: ಕನಕಮಜಲಿನಲ್ಲಿ ಸರ್ಕಾರಿ ಗೂಡ್ಸ್ ಬಸ್ ಹಾಗೂ ಬೈಕ್ ನಡುವೆ ಅವಘಾತ ಬೈಕ್ ಸವಾರನಿಗೆ ಗಂಭೀರ...

ಸುಳ್ಯ: ಕನಕಮಜಲಿನಲ್ಲಿ ಸರ್ಕಾರಿ ಗೂಡ್ಸ್ ಬಸ್ ಹಾಗೂ ಬೈಕ್ ನಡುವೆ ಅವಘಾತ ಬೈಕ್ ಸವಾರನಿಗೆ ಗಂಭೀರ ಗಾಯ

- Advertisement -
- Advertisement -

ಸುಳ್ಯ: ಸರ್ಕಾರಿ ಗೂಡ್ಸ್ ಬಸ್ ಹಾಗೂ ಬೈಕ್ ನಡುವೆ ಅವಘಾತ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ಕನಕಮಜಲಿನ ಆನೆಗುಂಡಿ ಎಂಬಲ್ಲಿ ನಡೆದಿದೆ

ಮಡಿಕೇರಿ ಡಿಪೋಗೆ ಸೇರಿದ ಕೆ.ಎಸ್ ಆರ್.ಟಿ.ಸಿ. ಗೂಡ್ಸ್ ಬಸ್ ಪುತ್ತೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಪಂಜದ ಯುವಕನೊಬ್ಬನ ಬೈಕ್ ಆನೆಗುಂಡಿ ತಿರುವಿನಲ್ಲಿ ಬಸ್ ನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ.

ಈ ವೇಳೆ ಬಸ್ ಚಾಲಕ ಬಸ್ಸನ್ನು ಸಂಪೂರ್ಣ ಎಡಭಾಗಕ್ಕೆ ಎಳೆದುಕೊಂಡದ್ದರಿಂದ ಬೈಕ್ ಸವಾರ ಬಲಬದಿಗೆ ಬಿದ್ದು, ಕೈ, ಹಾಗೂ ಎಡ ಕಾಲಿಗೆ ಗಂಭೀರವಾಗಿ ಗಾಯಗಳಾಗಿದೆ. ಪುತ್ತೂರಿನಿಂದ ಕನಕಮಜಲು ಕಡೆಗೆ ಬರುತ್ತಿದ್ದ ಅಟೋದಲ್ಲಿ  ಗಾಯಾಳು ಯುವಕನನ್ನು ಸುಳ್ಯದ  ಖಾಸಗಿ  ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಹಾನಿಯಾಗಿದೆ. ಬಸ್ ಚಾಲಕ ನಿಧಾನವಾಗಿ ಬಸ್ ಚಲಾಯಿಸುತ್ತಿದ್ದ ಕಾರಣ  ಚಾಲಕನ ಸಮಯಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದಂತಾಗಿದೆ.

- Advertisement -

Latest News

error: Content is protected !!