Saturday, June 13, 2026
Homeಕರಾವಳಿಕಾಸರಗೋಡುಕಾಡು ಹಂದಿ ಕೊಲ್ಲಲು ಅನುಮತಿ ನೀಡಿದ ಕೇರಳ ಸರ್ಕಾರ; ಕಿಡಿಕಾರಿದ ಪ್ರಾಣಿಪ್ರಿಯರು

ಕಾಡು ಹಂದಿ ಕೊಲ್ಲಲು ಅನುಮತಿ ನೀಡಿದ ಕೇರಳ ಸರ್ಕಾರ; ಕಿಡಿಕಾರಿದ ಪ್ರಾಣಿಪ್ರಿಯರು

- Advertisement -
- Advertisement -

ಕೇರಳ: ಕೃಷಿ ಜಮೀನುಗಳಲ್ಲಿ ಬೆಳೆ ಹಾಳು ಮಾಡುವ ಹಾಗು ಮನುಷ್ಯನ ಜೀವಕ್ಕೆ ಕುತ್ತು ತರುವ ಅಪಾಯಕಾರಿ ಕಾಡು ಹಂದಿಗಳ ಹತ್ಯೆಗೆ ಕೇರಳ ಸರ್ಕಾರ ಅನುಮತಿ ನೀಡಿದೆ.


ಕಾಡು ಹಂದಿಯನ್ನು ಕೊಲ್ಲಲು ಜನರು ಸ್ಥಳೀಯಾಡಳಿತ ಅನುಮತಿ ಪಡೆಯಬೇಕು ಎಂದು ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಆದರೆ, ಸರ್ಕಾರ ಆದೇಶದ ವಿರುದ್ಧ ಪ್ರಾಣಿಪ್ರಿಯರು ಕಿಡಿಕಾರಿದ್ದಾರೆ.


ಕಾಡು ಪ್ರದೇಶದ ಸುತ್ತಮುತ್ತ ವಾಸಿಸುವ ರೈತರು ಹಾಗು ನಿವಾಸಿಗಳಿಗೆ ತಮ್ಮಗೆ ಕಾಡುಹಂದಿಗಳಿಂದ ಆಗುತ್ತಿರುವ ತೊಂದರೆ ಹಾಗು ಬೆಳೆ ಹಾನಿ ಕುರಿತು ಸರ್ಕಾರದ ಗಮನ ಹರಿಸಿತ್ತು.
ಇದರ ಫಲವಾಗಿ ಕ್ರಮಕ್ಕೆ ಮುಂದಾಗಿರುವ ಕೇರಳ ಸರ್ಕಾರ ಯಾವ ಪ್ರದೇಶಗಳಲ್ಲಿ ಹಂದಿ ಉಪಟಳ ಹೆಚ್ಚಿದೆಯೋ ಅಂತಹ ಪ್ರದೇಶಗಳಲ್ಲಿನ ಹಂದಿಗಳನ್ನು ಕೊಲ್ಲಬಹುದು ಎಂದು ಸ್ಥಳೀಯಾಡಳಿತಕ್ಕೆ ಸೂಚಿಸಿದೆ.


ಬೆಳೆ ಹಾನಿ ನೆಪವೊಡ್ಡಿ ಕಾಡು ಹಂದಿಗಳ ಹತ್ಯೆಗೈಯಲ್ಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!