Tuesday, May 7, 2024
Homeಇತರಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿರುವ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು: ...

ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿರುವ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು: ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ, ಸಿದ್ದಲಿಂಗ ಸ್ವಾಮೀಜಿ

spot_img
- Advertisement -
- Advertisement -

ಬೀದರ್: ಸುಪ್ರೀಂ ಆದೇಶದ ಹೆಸರಿನಲ್ಲಿ ಆಡಳಿತದ ಮೂಲಕ ಧಾರ್ಮಿಕ ಕೇಂದ್ರ ದೇವಸ್ಥಾನಗಳನ್ನು ನೆಲಸಮಗೊಳಿಸಿ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿರುವ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಸಂಘ ಪರಿವಾರದಿಂದ ಬಂದವರಲ್ಲ, ಅವರೊಬ್ಬ ಕಮ್ಯುನಿಸ್ಟ್ ಪಕ್ಷದಿಂದ ಬಂದಿರುವ ನಾಯಕ. ಅವರಲ್ಲಿ ಹಿಂದೂಪರ ಗುಣಗಳು ಇರಲು ಸಾಧ್ಯವಿಲ್ಲ. ಹಾಗಾಗಿ ಹಿಂದೂ ವಿರೋಧಿ ನಿಲುವುಳ್ಳ ಬೊಮ್ಮಾಯಿ ಅವರನ್ನು ಸಿಎಂ ಹುದ್ದೆಯಿಂದ ತೆಗೆದು, ಒಬ್ಬ ಹಿಂದೂವಾದಿ ನಾಯಕನನ್ನು ಮುಖ್ಯಮಂತ್ರಿ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಪೆಟ್ಟು ಬೀಳುವುದು ನಿಶ್ಚಿತ ಎಂದು ಎಚ್ಚರಿಸಿದರು.

ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಜನರ ಅಭಿವೃದ್ಧಿಗಾಗಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿಲ್ಲ. ಬದಲಾಗಿ ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ನೆಲಸಮ ಮಾಡಲು ತಮ್ಮ ಆಡಳಿತವನ್ನು ಛೂ ಬಿಟ್ಟಿದ್ದಾರೆ. ಹಿಂದಿನ ಸಿಎಂ ಬಿಎಸ್‌ವೈ ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಮಠ- ಮಂದಿರಗಳನ್ನು ಅಭಿವೃದ್ಧಿಪಡಿಸಿದ್ದರು. ಆದರೆ, ಇಂದು ಸಿಎಂ ಹುದ್ದೆಗಾಗಿ ಅವರೇ ಸೂಚಿಸಿದ ವ್ಯಕ್ತಿ, ಬಿಎಸ್‌ವೈ ಮಾರ್ಗ ಅನುಸರಿಸದೇ ಹಿಂದೂಗಳ ಜತೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಸ್ಲಿಂ ತುಷ್ಠೀಕರಣಕ್ಕಿಳಿದ ಸಿಎಂ: ಸುಪ್ರೀಂ ಕೋರ್ಟ್ ಆದೇಶದಂತೆ ದೇಗುಲಗಳನ್ನು ನೆಲಸಮ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ಆದೇಶ ಒಂದು ಸಮುದಾಯಕ್ಕೆ ಗುರಿ ಪಡಿಸಿ ನೀಡಿದ ಆದೇಶವಲ್ಲ. ಇಡೀ ದೇಶದಲ್ಲಿ ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ ಮಂದಿರ, ಮಸೀದಿ ಮತ್ತು ಚರ್ಚ್ ಸೇರಿ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಬೇಕು ಎಂಬುದು ಆದೇಶದಲ್ಲಿದೆ. ಹಾಗಾಗಿದ್ದಲ್ಲಿ ಈವರೆಗೆ ಎಷ್ಟು ಅಕ್ರಮವಾಗಿ ಕಟ್ಟಿರುವ ಮಸೀದಿ, ಚರ್ಚ್‌ಗಳನ್ನು ನೆಲಸಮ ಮಾಡಿದ್ದೀರಿ ಎಂಬುದರ ಲೆಕ್ಕ ಕೊಡಿ ಎಂದು ಆಗ್ರಹಿಸಿದರು.

- Advertisement -
spot_img

Latest News

error: Content is protected !!