Friday, May 10, 2024
Homeತಾಜಾ ಸುದ್ದಿಶಾರುಖ್ 'ಫ್ಯಾನ್' ಸಿನಿಮಾದಿಂದ ಅಭಿಮಾನಿಗೆ ಮೋಸ; 15 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್!

ಶಾರುಖ್ ‘ಫ್ಯಾನ್’ ಸಿನಿಮಾದಿಂದ ಅಭಿಮಾನಿಗೆ ಮೋಸ; 15 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್!

spot_img
- Advertisement -
- Advertisement -

ಮುಂಬೈ: ಸಿನಿಮಾ ನೋಡಿ ತಮಗೆ ಮೋಸ ಆಯಿತು ಎಂದು ಕೋರ್ಟ್​ ಮೆಟ್ಟಿಲೇರಿ, ತಮಗಾದ ವಂಚನೆಗೆ ಪರಿಹಾರವನ್ನೂ ಪಡೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಬಾಲಿವುಡ್ ನಟ ಶಾರುಖ್ ಖಾನ್ ಅವರ ಸಿನಿಮಾ ನೋಡಿ ತನಗೆ ಮೋಸ ಆಯಿತು ಎಂದು ಅವರು ನ್ಯಾಯಾಲಯದ ಮೆಟ್ಟಿಲೇರಿ, ಈಗ ಪರಿಹಾರ ಸಹ ಪಡೆದುಕೊಂಡಿದ್ದಾರೆ.

ಆಫ್ರೀನ್​ ಫಾತಿಮಾ ಜೈದಿ ಎಂಬ ಮಹಿಳೆ ವೃತ್ತಿಯಲ್ಲಿ ಶಿಕ್ಷಕಿ. ಮಹಾರಾಷ್ಟ್ರದ ಔರಂಗಾಬಾದ್​ನವರು. ಇವರು 2016ರಲ್ಲಿ ತೆರೆ ಕಂಡ ಫ್ಯಾನ್​ ಸಿನಿಮಾ ನೋಡಿ, ಅದರಿಂದ ತಮಗೆ ಮೋಸ ಆಗಿದೆ ಎಂಬ ಎಂದು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಯಶ್​ ರಾಜ್​ ಫಿಲಂಸ್​ ನಿರ್ಮಾಣದ ಫ್ಯಾನ್​ ಸಿನಿಮಾ 2016ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ಶಾರುಖ್​ ಖಾನ್ ನಾಯಕನಾಗಿ ನಟಿಸಿದ್ದರು. ಈ ಚಿತ್ರದ ಟ್ರೇಲರ್​ನಲ್ಲಿ ‘ಜಬ್ರಾ ಫ್ಯಾನ್…..’​ ಎನ್ನುವ ಹಾಡನ್ನು ತೋರಿಸಲಾಗಿತ್ತು. ಈ ಹಾಡನ್ನು ಟಿವಿಯಲ್ಲೂ ಸಹ ಬಿತ್ತರಿಸಲಾಗಿತ್ತು. ಆದರೆ ಈ ಹಾಡನ್ನು ನೋಡಿ ಖುಷಿ ಪಟ್ಟು ಸಿನಿಮಾ ನೋಡಲು ಹೋದವರಿಗೆ ಚಿತ್ರ ಮಂದಿರದಲ್ಲಿ ಈ ಹಾಡು ನೋಡಲು ಸಿಗಲೇ ಇಲ್ಲವಂತೆ.ಇದು ಫಾತೀಮಾ ಅವರಿಗೆ ನಿರಾಸೆಯ ಜೊತೆ ಕೋಪಕ್ಕೆ ಕಾರಣವಾಯಿತು.

ಹೀಗೆ ಮೋಸ ಮಾಡಿದ ಚಿತ್ರತಂಡದ ವಿರುದ್ಧ ಫಾತೀಮಾ ಅವರು ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ಸಿನಿಮಾ ನಿರ್ಮಾಣ ಮಾಡಿದ್ದ ಯಶ್ ರಾಜ್ ಫಿಲಂಸ್ಗೆ 10 ಸಾವಿರ ಹಾಗೂ ಫಾತೀಮಾ ಸಿನಿಮಾ ನೋಡಲು ಖರ್ಚು ಮಾಡಿದ್ದ 5 ಸಾವಿರವನ್ನು ಸೇರಿಸಿ ಒಟ್ಟಾರೆ 15 ಸಾವಿರ ನೀಡಬೇಕು ಅಂತ ಗ್ರಾಹಕರ ವೇದಿಕೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಟ್ರೈಲರ್ ನಲ್ಲಿ ಒಂದು ತೋರಿಸಿ, ಸಿನಿಮಾದಲ್ಲಿ ಅದನ್ನು ತೋರಿಸದೆ ಇದ್ದ ಕಾರಣಕ್ಕೆ ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದಿದೆ. ದೂರು ದಾಖಲಿಸಿದ ಫಾತೀಮಾಗೆ 15 ಸಾವಿರ ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ.

- Advertisement -
spot_img

Latest News

error: Content is protected !!