Tuesday, May 7, 2024
Homeತಾಜಾ ಸುದ್ದಿತಾಯಿಯ ಸೆಲ್ಫಿ ಹುಚ್ಚಿಗೆ ಬಲಿಯಾಯ್ತು ಪುಟ್ಟ ಕಂದಮ್ಮ

ತಾಯಿಯ ಸೆಲ್ಫಿ ಹುಚ್ಚಿಗೆ ಬಲಿಯಾಯ್ತು ಪುಟ್ಟ ಕಂದಮ್ಮ

spot_img
- Advertisement -
- Advertisement -

ಕೇರಳ : ಕೆಲವರಿಗೆ ಎಷ್ಟರ ಮಟ್ಟಿಗೆ ಸೆಲ್ಫಿ ಹುಚ್ಚು ಅಂದ್ರೆ ನಿಂತಲ್ಲಿ, ಕುಂತಲ್ಲಿ, ಎದ್ದಲ್ಲಿ, ಬಂದಲ್ಲಿ, ಹೋದಲ್ಲಿ ಬರೀ ಅದೇ ಕೆಲ್ಸ. ಕೆಲವೊಮ್ಮೆ ಇದೇ ಸೆಲ್ಫಿ ಹುಚ್ಚು ಅದೆಷ್ಟೋ ಮಂದಿಯ ಪ್ರಾಣಕ್ಕೇ ಸಂಚಕಾರವಾಗಿದೆ. ಕೇರಳದ ಆಲಪ್ಪುಳದಲ್ಲಿ ಇಂತದಹ್ಹೇ ಒಂದು ಅನಾಹುತ ನಡೆದು ಹೋಗಿದೆ.

ಯೆಸ್.. ಹೆತ್ತಮ್ಮನ  ಸೆಲ್ಫಿ ಹುಚ್ಚಿಗೆ ಎರಡೂವರೆ ವರ್ಷದ ಗಂಡು ಮಗು ಪ್ರಾಣ ತೆತ್ತಿದೆ. ಭಾನುವಾರ ಸಂಜೆ ಆದಿಕೃಷ್ಣ ಎಂಬ ಎರಡೂವರೆ ವರ್ಷದ ಪುಟ್ಟ ಪೋರ ತನ್ನ ತಾಯಿಯೊಂದಿಗೆ ಸಮುದ್ರ ನೋಡೋದಕ್ಕೆ ಅಂತಾ ತೆರಳಿದ್ದ. ಮಗುವಿನ ತಾಯಿ  ಮಗನನ್ನು ಎತ್ತಿಕೊಂಡು ಸಮುದ್ರದ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಜೋರಾದ ಅಲೆಗಳು ಹೊಡೆದು ಆಯ ತಪ್ಪಿದ್ದಾರೆ. ಆಗ ಅವರ ತೋಳಿನಲ್ಲಿದ್ದ ಮಗುವನ್ನು ಕೈಬಿಟ್ಟಿದ್ದಾರೆ. ಆ ಪುಟ್ಟ ಕಂದಮ್ಮ ಅಲೆಗಳಲ್ಲಿ ಕೊಚ್ಚಿಹೋಗಿ ಮೃತಪಟ್ಟಿದೆ. ಇಂದು ಮಗುವಿನ ಮೃತದೇಹ ಪತ್ತೆಯಾಗಿದೆ.

ಭಾನುವಾರ ಸಂಜೆ ಜೋರಾಗಿ ಮಳೆಯೂ ಸುರಿಯುತ್ತಿತ್ತು. ಆದಿಕೃಷ್ಣನ ಅಪ್ಪ-ಅಮ್ಮ, ಅವರ ಸಂಬಂಧಿಕರೆಲ್ಲ ಸೇರಿ ಬೀಚ್​ಗೆ ತೆರಳಿದ್ದರು. ಅಲೆಗಳ ಪ್ರಮಾಣವೂ ಜಾಸ್ತಿ ಇತ್ತು. ಇನ್ನು ಈ ದಂಪತಿ ಪಾಲಕ್ಕಡ್ ನಿವಾಸಿಗಳು ಎಂದು ತಿಳಿದುಬಂದಿದೆ. ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ತ್ರಿಶೂರ್​ಗೆ ಬಂದಿದ್ದರು. ಆಗ ಬಂಧುಗಳೆಲ್ಲ ಸೇರಿ ಬೀಚ್​ಗೆ ತೆರಳಿದ್ದರು.

- Advertisement -
spot_img

Latest News

error: Content is protected !!