Friday, April 26, 2024
Homeಉದ್ಯಮಭಾರತದಿಂದ ನಿರ್ಗಮಿಸುವುದಿಲ್ಲ, ಆದರೆ ಉದ್ಯಮ ವಿಸ್ತರಣೆ ಮಾಡುವುದಿಲ್ಲ: ಟೊಯೋಟಾ ಇಂಡಿಯಾ ಕಠಿಣ ನಿರ್ಧಾರ

ಭಾರತದಿಂದ ನಿರ್ಗಮಿಸುವುದಿಲ್ಲ, ಆದರೆ ಉದ್ಯಮ ವಿಸ್ತರಣೆ ಮಾಡುವುದಿಲ್ಲ: ಟೊಯೋಟಾ ಇಂಡಿಯಾ ಕಠಿಣ ನಿರ್ಧಾರ

spot_img
- Advertisement -
- Advertisement -

ಬೆಂಗಳೂರು: ಕೇಂದ್ರ ಸರ್ಕಾರ ಜಾಗತಿಕ ಕಂಪನಿಗಳಿಗೆ ತೆರಿಗೆ ಹಾಕುತ್ತಿರುವ ರೀತಿ ಸಮರ್ಪಕವಾಗಿಲ್ಲ ಆರ್ಥಿಕತೆ ಕುಸಿದಿದೆ, ಆಟೋಮೊಬೈಲ್ ಮಾರಾಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರ ನಡುವೆ ಅತಿಯಾದ ತೆರಿಗೆಯಿಂದ ಕಂಪನಿಗೆ ನಷ್ಟವಾಗುತ್ತಿದೆ. ಈ ಎಲ್ಲ ವಿಷಯಗಳನ್ನು ಆಧರಿಸಿ ಇನ್ನುಮುಂದೆ ಭಾರತದಲ್ಲಿ ಉದ್ಯಮ ವಿಸ್ತರಿಸುವುದಿಲ್ಲ ಎಂದು ಟೊಯೋಟಾ ಇಂಡಿಯಾ ಹೇಳಿದೆ.
ಟೊಯೋಟಾ ಕಂಪನಿ ಇಂಧನ ವಾಹನಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸುತ್ತಿದೆ ಆದರೆ ಕೇಂದ್ರ ಸರ್ಕಾರ ಭಾರತೀಯ ಉದ್ಯಮಗಳ ಪೋಷಣೆ ಹೆಸರಲ್ಲಿ ಆರ್ಥಿಕತೆ ವಿಸ್ತರಿಸಿ ಸುಭದ್ರವಾಗಿ ಬೇರುಬಿಟ್ಟಿರುವ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕಂಪನಿಗಳ ಮೇಲೆ ತೆರಿಗೆ ಹೆಸರಿನಲ್ಲಿ ಭಾರಿ ಹೊರೆ ನೀಡುತ್ತಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದು ಕಚ್ಚಾ ವಸ್ತುಗಳ ಆಮದಿನ ಮೇಲೆ ಹೆಚ್ಚಿನ ತೆರಿಗೆ ಹಾಕಲಾಗುತ್ತಿದೆ .ಇದು ದೇಶದ ಬೆಳವಣಿಗೆಗೆ ಅಪಾಯಕಾರಿ .ನಾವು ಭಾರತದಿಂದ ನಿರ್ಗಮಿಸುವ ಉದ್ದೇಶ ಹೊಂದಿಲ್ಲ. ಆದರೆ ಉದ್ಯಮ ವಿಸ್ತರಣೆ ಮಾಡುವುದಿಲ್ಲ.
ಎಂದು ಟೊಯೋಟಾ ಕಿರ್ಲೋಸ್ಕರ್ ಮುಖ್ಯಸ್ಥ ಶೇಖರ್ ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ.

- Advertisement -
spot_img

Latest News

error: Content is protected !!