Sunday, May 5, 2024
Homeತಾಜಾ ಸುದ್ದಿವಿಚಾರಣೆ ವೇಳೆ ಉಲ್ಟಾ ಹೊಡೆದ ಸಂಜನಾ: ಡಾ.ಅಜೀಜ್ ಪಾಶಾ ಜೊತೆಗೆ ಲವ್ ಬ್ರೇಕಪ್.!

ವಿಚಾರಣೆ ವೇಳೆ ಉಲ್ಟಾ ಹೊಡೆದ ಸಂಜನಾ: ಡಾ.ಅಜೀಜ್ ಪಾಶಾ ಜೊತೆಗೆ ಲವ್ ಬ್ರೇಕಪ್.!

spot_img
- Advertisement -
- Advertisement -

ಬೆಂಗಳೂರು: ‘‘ಡಾ.ಅಜೀಜ್ ಪಾಶಾ ಕಳೆದ ವರ್ಷ ನನಗೆ ಪ್ರಪೋಸ್ ಮಾಡಿದ್ದರು, ನಮ್ಮಿಬ್ಬರ ಮದುವೆ ಮಾತುಕತೆ ನಡೆಯುತ್ತಿದೆ” ಎಂದು ಅರೆಸ್ಟ್ ಆಗುವ ಮುನ್ನ ನಟಿ ಸಂಜನಾ ಹೇಳಿದ್ದರು. ಇದೇ ಗ್ಯಾಪ್ ನಲ್ಲಿ ಸಂಜನಾ ಮತ್ತು ಡಾ.ಅಜೀಜ್ ಪಾಶಾ ಮದುವೆ ಆಗಿದ್ದಾರೆ ಎನ್ನಲಾದ ಫೋಟೋವೊಂದು ಲೀಕ್ ಆಯ್ತು. ”ಅದು ಮದುವೆನೇ” ಅಂತ ಒಮ್ಮೆ ಡಾ.ಅಜೀಜ್ ಪಾಶಾ ಹೇಳಿದರೆ, ಇನ್ನೊಮ್ಮೆ ”ಸಂಜನಾ ನನ್ನ ಫಿಯಾನ್ಸಿ” ಎಂದಿದ್ದರು.

ಅತ್ತ ಸಂಜನಾ ತಾಯಿ ರೇಷ್ಮಾ ಗಲ್ರಾನಿ, ”ಸಂಜನಾಗಿನ್ನೂ ಮದುವೆ ಆಗಿಲ್ಲ. ನಿಶ್ಚಿತಾರ್ಥ ಆಗಿದೆ ಅಷ್ಟೇ. ಡಾ.ಅಜೀಜ್ ಪಾಶಾ ಒಳ್ಳೆಯವರು. ಏಪ್ರಿಲ್ ನಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್ ಡೌನ್ ಆಯಿತು” ಅಂತ ಹೇಳಿದ್ದರು. ಇಷ್ಟೆಲ್ಲಾ ಇರುವಾಗಲೇ, ಸಿಸಿಬಿ ಪೊಲೀಸರ ಮುಂದೆ ನಟಿ ಸಂಜನಾ ಕಂಪ್ಲೀಟ್ ಆಗಿ ಯೂ-ಟರ್ನ್ ಹೊಡೆದಿದ್ದಾರೆ.

ನಟಿ ಸಂಜನಾ ತಮ್ಮ ಲವ್ ಬ್ರೇಕಪ್ ಬಗ್ಗೆ ಸಿಸಿಬಿ ಮುಂದೆ ಹೇಳಿದ್ದಾರೆ. ನಾನು ಹಾಗೂ ವೈದ್ಯ ಅಜೀಜ್ ಪಾಷ ಒಟ್ಟಿಗೆ ಇಲ್ಲ. ನನಗೂ ಅವರಿಗೂ ಬ್ರೇಕಪ್ ಆಗಿ ವರ್ಷವೇ ಕಳೆದಿದೆ. ಮದುವೆ ಆಗುವ ತೀರ್ಮಾನ ಮಾಡಿದ್ದೆವು. ಆದರೆ ಮದುವೆ ಆಗಿರಲಿಲ್ಲ. ಆದರೆ ಕಳೆದ 1 ವರ್ಷದಿಂದ ಇಬ್ಬರು ದೂರವಾಗಿದ್ದೇವೆ. ಹೀಗಾಗಿ ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ತನಿಖೆ ವೇಳೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಇನ್ನೂ ಡ್ರಗ್ಸ್ ದಂಧೆಯಲ್ಲಿ ಭಾವಿ ಪತಿ ಡಾ.ಅಜೀಜ್ ಪಾಶಾ ರನ್ನ ಬಚಾವ್ ಮಾಡಲು ಸಂಜನಾ ಹೀಗೆ ಸುಳ್ಳು ಹೇಳ್ತಿದ್ದರಾ.? ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

ಸಂಜನಾ ಮದುವೆ:
ಸಿಸಿಬಿ ಪೊಲೀಸರ ಅತಿಥಿಯಾಗಿರುವ ನಟಿ ಸಂಜನಾ ಗಲ್ರಾನಿ ಅವರ ಮದುವೆ ಕುರಿತವಾಗಿ ಸ್ಫೋಟಕ ಫೋಟೋವೊಂದು ಹೊರಬಿದ್ದಿತ್ತು. ನಟಿ ಸಂಜನಾ ಒಂದು ವರ್ಷದ ಹಿಂದೆಯೇ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಆಗಾಗ ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಬರುತ್ತಿದ್ದರು. ಮದುವೆಯ ಬಳಿಕ ಒಂದು ವರ್ಷದಿಂದ ಗಂಡನ ಜೊತೆಗೆ ಸಂಜನಾ ಇದ್ದರು. ಅಲ್ಲದೇ ಸಂಜನಾ ಮಾಡುತ್ತಿದ್ದ ಪಾರ್ಟಿಗಳಲ್ಲಿ ಅಜೀಜ್ ಪಾಷ ಭಾಗಿಯಾಗುತ್ತಿದ್ದರು ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!