Thursday, April 25, 2024
Homeಕರಾವಳಿಏಕಕಾಲದಲ್ಲಿ ಎರಡೂ ಕೈಯಲ್ಲಿ ವಿಭಿನ್ನ ಬರಹ: ಮಂಗಳೂರಿನ ಬಾಲಕಿಯಿಂದ ವಿನೂತನ ದಾಖಲೆ

ಏಕಕಾಲದಲ್ಲಿ ಎರಡೂ ಕೈಯಲ್ಲಿ ವಿಭಿನ್ನ ಬರಹ: ಮಂಗಳೂರಿನ ಬಾಲಕಿಯಿಂದ ವಿನೂತನ ದಾಖಲೆ

spot_img
- Advertisement -
- Advertisement -

ಮಂಗಳೂರು: ಮಾಮೂಲಿಯಾಗಿ ಎಲ್ಲರೂ ಒಂದು ಕೈಯಲ್ಲಿ ಬರೆಯೋದು ನಾವೆಲ್ಲ ನೋಡಿದ್ದೇವೆ, ನಾವೂ ಬರೆಯುತ್ತೇವೆ. ಆದರೆ ಮಂಗಳೂರಿನ ಬಾಲಕಿಯೋರ್ವಳು ಎರಡು ಕೈಗಳಲ್ಲಿಯೂ ಏಕಕಾಲದಲ್ಲಿ ಬೇರೆ ಬೇರೆ ವಿಚಾರಗಳನ್ನು ಬರೆಯುತ್ತಾಳೆ. ಅದು ಉಲ್ಟಾ ಬರವಣಿಗೆಯೂ ಇರಲಿ, ಮಿರರ್ ಏಫೆಕ್ಟ್ ರೈಟಿಂಗೂ ಇರಲಿ ಎಲ್ಲವನ್ನೂ ಆಕೆ ಸಲೀಸಾಗಿ ಬರೆಯುತ್ತಾಳೆ.

ಏಕಕಾಲಕ್ಕೆ ಎರಡೂ ಕೈಗಳಿಂದ ಇಂಗ್ಲಿಷ್‌ ಪದಗಳನ್ನು ಸುಂದರವಾಗಿ ಒಂದು ನಿಮಿಷಕ್ಕೆ 45 ಪದಗಳಂತೆ ಯುನಿಡೈರೆಕ್ಷನಲ್‌ ಶೈಲಿಯಲ್ಲಿ ಬರೆಯುವ ಮಂಗಳೂರಿನ ಬಾಲಕಿ ಆದಿ ಸ್ವರೂಪ ಅವರ ಸಾಧನೆಗೆ ಉತ್ತರ ಪ್ರದೇಶದ ಬರೇಲಿಯಾ ಲತಾ ಫೌಂಡೇಶನ್‌ ಸಂಸ್ಥೆಯು ಎಕ್ಸ್ ಕ್ಲೂಸಿವ್‌ ವರ್ಲ್ಡ್‌ ರೆಕಾರ್ಡ್‌ ಘೋಷಿಸಿದೆ.

ಈಕೆಯ ತಂದೆ ಗೋಪಾಡ್ಕರ್ ಅವರ ಶಿಕ್ಷಣ ಸಂಸ್ಥೆ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ ಎಡ ಕೈಯಲ್ಲಿ ಬರೆಯುವ ಅಭ್ಯಾಸ ಮಾಡಿಸಲಾಗುತ್ತೆ. ಈ ಸಂದರ್ಭ ಆರಂಭಿಸಿದ ಆದಿ ಸ್ವರೂಪ ಇದೀಗ ಎರಡು ವರ್ಷದಲ್ಲಿ ಎರಡೂ ಕೈಯಲ್ಲಿ ತನ್ನದೇ ಆದ ಯುನಿಡೈರೆಕ್ಷನಲ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್ ಚೇಂಜ್, ಡ್ಯಾನ್ಸಿಂಗ್ ಮತ್ತು ಬ್ಲೈಂಡ್ ಫೋಲ್ಡಿಂಗ್ ಎನ್ನುವ ಹತ್ತು ವಿಧಾನಗಳನ್ನು ಪ್ರಯೋಗ ಮಾಡಿದ್ದಾಳೆ.

ಬಹುಮುಖ ಪ್ರತಿಭೆ
ಆದಿಸ್ವರೂಪ ಬಹುಮುಖ ಪ್ರತಿಭೆಯ ಬಾಲಕಿ. ಕಲಿಸದೆ ಕಲಿಯುವ ಸ್ವರೂಪ ಶಿಕ್ಷಣದ ಸ್ವಕಲಿಕಾ ವಿಧಾನದಂತೆ ಒಂದೂವರೆ ವರ್ಷ ಪ್ರಾಯದಲ್ಲೇ ಓದಲು, ಎರಡೂವರೆ ವರ್ಷ ಪ್ರಾಯದಲ್ಲಿ ದಿನಕ್ಕೆ 30 ಪುಟಗಳಷ್ಟು ಬರೆಯುವ ಸಾಮರ್ಥ್ಯ ಮೈಗೂಡಿಸಿದ್ದರು. ಹಾಗೆ ಸ್ವಯಂ ಆಸಕ್ತಿಯಿಂದ ಅಭ್ಯಾಸ ಮಾಡಿದ್ದು, ಎಂದೂ ಶಾಲೆಗೆ ಹೋಗದೆ ಇದೀಗ 10ನೇ ತರಗತಿಯ ಪರೀಕ್ಷೆಯನ್ನು ಖಾಸಗಿಯಾಗಿ ಎರಡೂ ಕೈಗಳಿಂದ ಬರೆಯಲು ಸಿದ್ಧರಾಗಿದ್ದಾರೆ. ಹಿಂದೂಸ್ತಾನಿ ಸಂಗೀತವನ್ನು ಪಂಡಿತ್‌ ರವಿಕಿರಣ್‌ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. 7 ವರ್ಷಗಳಲ್ಲಿ 50ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಈಗಾಗಲೇ 40 ಕತೆಗಳುಳ್ಳ ಕಥಾ ಸಂಕಲನ ಹೊರತಂದಿದ್ದಾರೆ. 40 ಚಿತ್ರಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನೂ ನಡೆಸಿದ್ದಾರೆ. ಇಂಗ್ಲಿಷ್‌ನಲ್ಲಿ ಫ್ಯಾಂಟಸಿ ಕಾದಂಬರಿ ಬರೆಯುತ್ತಿದ್ದಾರೆ.

- Advertisement -
spot_img

Latest News

error: Content is protected !!