Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಬುಳೇರಿ ಮೊಗ್ರು ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆ; ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ, ಬೋರ್‌ವೆಲ್...

ಬೆಳ್ತಂಗಡಿ: ಬುಳೇರಿ ಮೊಗ್ರು ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆ; ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ, ಬೋರ್‌ವೆಲ್ ಸೌಲಭ್ಯ

- Advertisement -
- Advertisement -

ಬೆಳ್ತಂಗಡಿ:ಮೊಗ್ರು ಗ್ರಾಮ ಬುಳೇರಿಮೊಗ್ರು ಸರಕಾರಿ ಪ್ರೌಢ ಶಾಲೆ ಯಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ತಮ್ಮಶಾಸಕರ ವಿವೇಚನಾ ನಿಧಿಯಿಂದ ಬೋರ್‌ವೆಲ್ ಸೌಲಭ್ಯವನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಜನಸ್ನೇಹಿ ಶಾಸಕ ಹರೀಶ್ ಪೂಂಜ ವಿದ್ಯಾಭ್ಯಾಸಕ್ಕೆ ಹೊಸ ಚೈತನ್ಯ ತುಂಬಿದ್ದಾರೆ.

ಶುದ್ಧ ನೀರಿನ ಸೌಲಭ್ಯವು ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅತ್ಯಗತ್ಯ ಎಂಬುದನ್ನು ಅರಿತು, ಶಾಲೆಯ ಮೂಲಭೂತ ಅಗತ್ಯಕ್ಕೆ ತಕ್ಷಣ ಸ್ಪಂದಿಸಿರುವ ಮಾನ್ಯ ಶಾಸಕರ ಈ ಜನಪರ ಕಾಳಜಿ ನಿಜಕ್ಕೂ ಶ್ಲಾಘನೀಯ. “ಮಕ್ಕಳ ಭವಿಷ್ಯವೇ ನಾಳೆಯ ಬಲಿಷ್ಠ ಸಮಾಜ” ಎಂಬ ಧೈಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಾಸಕರಿಗೆ ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ದoಬೆತ್ತಿಮಾರು, ಹಾಗೂ ಪಿಜಿನ ಮೊಗೇರ,ಶಾಲಾ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು, ಮುಖ್ಯೋಪಾದ್ಯಾಯರು,ಶಿಕ್ಷಕ ವೃಂದ, ಪೋಷಕ ವೃಂದ,ವಿದ್ಯಾರ್ಥಿಗಳು, ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು

- Advertisement -

Latest News

error: Content is protected !!