Saturday, May 18, 2024
Homeಇತರಕೊರೊನಾ ವಿರುದ್ಧದ ಯುದ್ಧಕ್ಕೆ ಆಯುರ್ವೇದ ಅಸ್ತ್ರ ಪ್ರಯೋಗ ಸಕ್ಸಸ್

ಕೊರೊನಾ ವಿರುದ್ಧದ ಯುದ್ಧಕ್ಕೆ ಆಯುರ್ವೇದ ಅಸ್ತ್ರ ಪ್ರಯೋಗ ಸಕ್ಸಸ್

spot_img
- Advertisement -
- Advertisement -

ಬೆಂಗಳೂರು : ಕೊರೊನಾಗೆ ಆಯುರ್ವೇದ ಚಿಕಿತ್ಸೆ ವರ್ಕೌಟ್ ಆಗುತ್ತೆ ಅನ್ನೋ ಮಾತುಗಳು ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಇದೀಗ ಅದು ನಿಜ ಅನ್ನೋದು ಪ್ರೂವ್ ಆಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹತ್ತು ಮಂದಿ ಕೊರೊನಾ ಪೀಡಿತರಿಗೆ ಖ್ಯಾತ ಆಯುರ್ವೇದ ವೈದ್ಯ ಗಿರಿಧರ ಕಜೆ ನೇತೃತ್ವದಲ್ಲಿ ರೋಗಿಗಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ರೋಗಿಗಳಿಗೆ ಜೂನ್ ಜೂನ್ 7 ರಿಂದಲೇ ಚಿಕಿತ್ಸೆ ಆರಂಭವಾಗಿದ್ದು, ಈ ಚಿಕಿತ್ಸೆಯಿಂದಲೇ ಕಂಪ್ಲೀಟ್ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

20 ರಿಂದ 60 ವರ್ಷದವರಿಗೆ ನೀಡಿದ ಚಿಕತ್ಸೆ ಸಕ್ಸಸ್

ಕೊರೊನಾದ ಜೊತೆಗೆ ರಕ್ತದೊತ್ತಡ, ಮಧುಮೇಹ ಮುಂತಾದ ರೋಗಗಳನ್ನು ಹೊಂದಿರುವ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು ಎನ್ನಲಾಗಿದೆ. 20ರಿಂದ 63ರ ವಯೋಮಿತಿಯವರಿಗೆ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ತೊಂದರೆಗಳಿಲ್ಲದೇ 10 ದಿನದೊಳಗೆ ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಇತರೆ ರೋಗಿಗಳಿಗಿಂತ ಬೇಗ ಆಯುರ್ವೇದ ಚಿಕಿತ್ಸೆ ಪಡೆದವರು ಗುಣಮುಖರಾಗಿದ್ದಾರೆ ಅಂತಾ ಹೇಳಲಾಗುತ್ತಿದೆ.
ಅತೀ ಕಡಿಮೆ ದರದಲ್ಲಿ ಚಿಕಿತ್ಸೆ
ಆಸ್ಪತ್ರೆಗಳಲ್ಲಿ ಸದ್ಯ ಕೊರೊನಾ ರೋಗಿಗಳು ಕೊರೊನಾಗೆ ಚಿಕಿತ್ಸೆ ಪಡೆದುಕೊಳ್ಳಬೇಕಾದ್ರೆ ಸಾವಿರಾರು ರೂಪಾಯಿಗಳನ್ನು ವ್ಯಯಿಸಬೇಕಾಗುತ್ತಿದೆ.ಆದರೆ ಆಯುರ್ವೇದ ಚಿಕಿತ್ಸೆ ಹಾಗಲ್ಲ. ಆ ಚಿಕಿತ್ಸೆಯ ವೆಚ್ಚವೂ ಕೂಡ ಕಡಿಮೆ. ಕೇವಲ 90ರಿಂದ 180 ರೂಪಾಯಿಯಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ. ಗಿರಿಧರ್ ಕಜೆಯವರ ತಂಡದ ಈ ಪ್ರಯತ್ನ ಶ್ಲಾಘನೀಯ ಮತ್ತು ಕೊರೊನಾದ ವಿರುದ್ಧದ ಹೋರಾಟಗಾರರಿಗೆ ಒಂದು ಸಂಜೀವಿನಿ ಸಿಕ್ಕಂತಾಗಿದೆ.

- Advertisement -
spot_img

Latest News

error: Content is protected !!