Friday, July 17, 2026
Homeಅಪರಾಧಬಂಟ್ವಾಳ: ಮಸೀದಿಗೆ ನುಗ್ಗಿ ಧರ್ಮಗುರುಗಳ ಮೇಲೆ ಹಲ್ಲೆ ನಡೆಸಲು ಯತ್ನ...! ಮೂವರ ಬಂಧನ...!

ಬಂಟ್ವಾಳ: ಮಸೀದಿಗೆ ನುಗ್ಗಿ ಧರ್ಮಗುರುಗಳ ಮೇಲೆ ಹಲ್ಲೆ ನಡೆಸಲು ಯತ್ನ…! ಮೂವರ ಬಂಧನ…!

- Advertisement -
- Advertisement -

ಬಂಟ್ವಾಳ: ಮಸೀದಿಯೊಳಗೆ ನುಗ್ಗಿ ಅಲ್ಲಿನ ಧರ್ಮಗುರುಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಮೂರು ಮಂದಿಯನ್ನು ನವೆಂಬರ್ 15 ರಂದು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಟ್ವಾಳದ ಕಾರ್ನಾಡ್ ನಿವಾಸಿ ಶರಣ್ (24), ವಿಘ್ನೇಶ್ (23) ಹಾಗು ಹರ್ಷಿತ್ (22) ಎಂದು ಗುರುತಿಸಲಾಗಿದೆ.

ನವೆಂಬರ್ 14 ರ ಭಾನುವಾರ ಮಧ್ಯರಾತ್ರಿ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಅಬ್ದುಲ್ ಸಮೀರ್ ಮನೆ ಬಳಿ ಬಂದ ಆರೋಪಿಗಳು ಮುಸ್ಲಿಂ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ದೂರುದಾರರು ಮನೆಯಿಂದ ಹೊರಗೆ ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆ ಬಳಿಕ ಮಸೀದಿಗೆ ನುಗ್ಗಿ ಧರ್ಮಗುರುಗಳನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿತ್ತು.

- Advertisement -

Latest News

error: Content is protected !!