Sunday, May 19, 2024
Homeಅಪರಾಧಉಜಿರೆ: ವ್ಯಾನಿಟಿ ಬ್ಯಾಗಿನಲ್ಲಿದ್ದ 18 ಪವನ್ ಚಿನ್ನ ಕಳವು !

ಉಜಿರೆ: ವ್ಯಾನಿಟಿ ಬ್ಯಾಗಿನಲ್ಲಿದ್ದ 18 ಪವನ್ ಚಿನ್ನ ಕಳವು !

spot_img
- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆ ನಿವಾಸಿ ಅಬ್ದುಲ್ ಲತೀಫ್ ಅವರ ಪತ್ನಿ ಐಸಮ್ಮ ತನ್ನ ಮಕ್ಕಳು ಮತ್ತು ತಂದೆಯ ಜೊತೆಗೆ ಪೆರ್ಲಾಪುವಿನಿಂದ ಕಡೇಶಿವಾಲ್ಯ-ಅಮೈ-ಉಪ್ಪಿನಂಗಡಿ ಮಾರ್ಗವಾಗಿ ಎರಡು ರಿಕ್ಷಾ ಹಾಗೂ ಸರಕಾರಿ ಬಸ್ಸಿನಲ್ಲಿ ಉಜಿರೆ ಕಡೆಗೆ ಪ್ರಯಾಣಿಸಿದ್ದರು. ಈ ವೇಳೆ ಉಜಿರೆಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಧರಿಸಲೆಂದು ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಲಾಗಿದ್ದ 18 ಪವನ್ ಚಿನ್ನ ಕಾಣೆಯಾಗಿದೆ. ಈ ಕುರಿತು ಐಸಮ್ಮರ ಪತಿ ಅಬ್ದುಲ್ ಲತೀಫ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವ್ಯಾನಿಟಿ ಬ್ಯಾಗ್‌ನಲ್ಲಿ 1 ಸರ, 5 ಉಂಗುರ, 2 ಬಳೆ, 2 ಬ್ರೇಸ್‌ಲೆಟ್, 1 ಪೆಂಡೆಂಟ್ ಸಹಿತ 18 ಪವನ್ ತೂಕದ ಚಿನ್ನಾಭರಣವಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಟೋದಲ್ಲಿ ಚಿನ್ನ ಕಳವು ಆಯಿತೋ? ಅಥವಾ ಬಸ್ಸ್ ನಲ್ಲಿ ಚಿನ್ನ ಕಳವು ಆಯಿತೋ ಎಂಬುದು ತಿಳಿದಿಲ್ಲ.

ಚಿನ್ನಾಭರಣ ಸಿಕ್ಕಿದವರು ಈ ಕೂಡಲೇ ಮೊ. ಸಂ:8971449546, 9901725660ಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!