Tuesday, May 14, 2024
Homeಕರಾವಳಿಉಡುಪಿಉಡುಪಿಯಲ್ಲಿ ಇಂದಿನಿಂದ ಲಕ್ಷದೀಪೋತ್ಸವದ ಮೆರುಗು !

ಉಡುಪಿಯಲ್ಲಿ ಇಂದಿನಿಂದ ಲಕ್ಷದೀಪೋತ್ಸವದ ಮೆರುಗು !

spot_img
- Advertisement -
- Advertisement -

ಉಡುಪಿಯಲ್ಲಿ ಗೂಡುದೀಪಗಳು ನಾಲ್ಕು ಬೀದಿಯ ಸುತ್ತ ರಂಗೇರಿದೆ. ಹಣತೆಗಳು ದೀಪ ಬೆಳಗಲು ಸಿದ್ಧವಾಗಿದೆ. ಮಧ್ವ ಸರೋವರದಲ್ಲಿ ತೆಪ್ಪೋಸ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದೆ.
ನ.19ರ ವರೆಗೆ ನಾಲ್ಕು ದಿನಗಳ ಕಾಲ ಉಡುಪಿಯಲ್ಲಿ ದೀಪೋತ್ಸವದ ಮೆರುಗು. ರಥಬೀದಿ ಸುತ್ತ 400 ಕ್ಕೂ ಹೆಚ್ಚು ಗೂಡುದೀಪಗಳನ್ನು ಅಳವಡಿಸಲಾಗಿದೆ.

ಪ್ರತೀದಿನ ಶುದ್ಧ ಎಳ್ಳೆಣ್ಣೆಯಿಂದ ದೀಪಗಳನ್ನು ದೇವಾಲಯದ ಹೊರಭಾಗದಲ್ಲಿ ಉರಿಸಲಾಗುತ್ತಿದೆ. ಸುಮಾರು ಒಂದು ತಿಂಗಳಿನಿಂದ ಕೃಷ್ಣನ ಸನ್ನಿಧಾನದಲ್ಲಿ ಪಕ್ಷಗಾರ ಪೂಜೆಯ ನಿಮಿತ್ತ ದೀಪಗಳನ್ನು ಹಚ್ಚಲಾಗುತ್ತಿತ್ತು. ಈ ಬಾರಿ ಲಕ್ಷದೀಪೋತ್ಸವಕ್ಕಾಗಿ ಸುಮಾರು 600 ಲೀಟರ್‌ ಶುದ್ಧ ಎಳ್ಳೆಣ್ಣೆಯನ್ನು ಸಂಗ್ರಹಿಸಲಾಗಿದೆ.ಭಕ್ತರೂ ಭಾಗವಹಿಸಬಹುದು.

ಸುಮಾರು 35,000 ಮಣ್ಣಿನ ಹಣತೆ ದೀಪಗಳನ್ನು ರಥಬೀದಿ ಸುತ್ತಲೂ ಬೆಳಗಿಸಲಾಗುತ್ತದೆ. ಇದಲ್ಲದೆ ಮಧ್ವಸರೋವರ, ಶ್ರೀಕೃಷ್ಣಮಠದೊಳಗೆ ದೀಪಗಳನ್ನು ಬೆಳಗಿಸಲಾಗುತ್ತದೆ. ಈಗಾಗಲೇ ಮಠದ ಸುತ್ತ ಹೂವಿನ ಅಂಗಡಿ, ಬಟ್ಟೆ, ಹಣತೆ,ಆಟಿಕೆ, ಮಿಠಾಯಿ, ಇನ್ನೂ ಹಲವಾರು ಅಂಗಡಿ ಮುಂಗಟ್ಟುಗಳು ತಮ್ಮ ವ್ಯಾಪಾರ ಶುರು ಮಾಡಿದ್ದಾರೆ.

ಇಂದು ಅಪರಾಹ್ನ 2.50ಕ್ಕೆ ರಥಬೀದಿಯಲ್ಲಿ ಸ್ವಾಮೀಜಿಯವರು ಹಣತೆಗಳನ್ನಿಟ್ಟು ಮುಹೂರ್ತ ನಡೆಸಲಿದ್ದಾರೆ. ಅಪರಾಹ್ನ 4ಕ್ಕೆ ತುಳಸೀಪೂಜೆ ಮುಕ್ತಾಯಗೊಳ್ಳಲಿದ್ದು ಆ ಬಳಿಕ ಕ್ಷೀರಾಬ್ದಿ ಪೂಜೆ ಮಧ್ವಸರೋವರದಲ್ಲಿ ನಡೆಯಲಿದೆ. ಕ್ಷೀರಾಬ್ದಿ ಪೂಜೆ ಬಳಿಕ ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರನ ಉತ್ಸವ ಮೂರ್ತಿಗಳು ಎರಡು ರಥಗಳ ಮೂಲಕ ವಿಜೃಂಭಣೆಯಿಂದ ಭಕ್ತರು ರಥ ಎಳೆಯುವ ಮೂಲಕ ನಡೆಯಲಿದೆ.

ರಥೋತ್ಸವವು ಸಂಜೆ 6.45ಕ್ಕೆ ಆರಂಭವಾಗಲಿದ್ದು ಆ ಬಳಿಕವೇ ರಥಬೀದಿಯಲ್ಲಿ ಭಕ್ತರು ದೀಪವನ್ನು ಬೆಳಗಿಸಬೇಕು ಎಂದು ತಿಳಿಸಿದ್ದಾರೆ. ಲಕ್ಷ ದೀಪೋತ್ಸವದ ಅಂಗವಾಗಿ ವಿಶೇಷ ಸಿಡಿಮದ್ದು ಪ್ರದರ್ಶನ ಇದೆ.

- Advertisement -
spot_img

Latest News

error: Content is protected !!