Monday, June 8, 2026
Homeಕರಾವಳಿಕೇಮಾರಿನಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ(ರಿ)ಕೇಂದ್ರೀಯ ಸಮಿತಿಯ ಸಭೆ; ಪ್ರತಿಯೊಬ್ಬರು ಅಂತರ್ಮುಖಿಗಳಾಗಿ ಚಿಂತಿಸಿ; ಕೇಮಾರು...

ಕೇಮಾರಿನಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ(ರಿ)ಕೇಂದ್ರೀಯ ಸಮಿತಿಯ ಸಭೆ; ಪ್ರತಿಯೊಬ್ಬರು ಅಂತರ್ಮುಖಿಗಳಾಗಿ ಚಿಂತಿಸಿ; ಕೇಮಾರು ಶ್ರೀ

- Advertisement -
- Advertisement -

ಮೂಡಬಿದ್ರಿ: ಇಲ್ಲಿನ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ(ರಿ) ಮೆಲ್ಕಾರ್ ಇದರ ಕೇಂದ್ರೀಯ ಸಮಿತಿಯ ಸಭೆಯು ಕೇಮಾರು ಶ್ರೀ ಸಾಂದೀಪನಿ ಸಾಧನ ಆಶ್ರಮದಲ್ಲಿ ಜರಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖೇನ ಉದ್ಘಾಟಿಸಿದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ‘ಉತ್ತಮ ದಾರಿಯಲ್ಲಿ ಸಾಗಲು ಎಲ್ಲರಿಗೂ ಸಮಾಜದಲ್ಲಿರುವ ಹಿರಿಯರ ಅನುಭವ ಮತ್ತು ಚಿಂತನೆಗಳು ಪ್ರಯೋಜನಕಾರಿಯಾಗಿದ್ದು ವೇದ, ಉಪನಿಷತ್ ಮತ್ತು ಭಗವದ್ಗೀತೆಗಳ ಅಧ್ಯಯನದಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು,’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಕೈಯೂರ್ ನಾರಾಯಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ರತಿಷ್ಠಾನದ ಕಾರ್ಯಗಳಿಗೆ ಕಳೆದ ಮೂರು ವರ್ಷಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು ಘಟಕಗಳನ್ನು ಉಡುಪಿ ಜಿಲ್ಲೆಯಲ್ಲಿ ವಿಸ್ತರಿಸಲು ಪ್ರಯತ್ನಿಸಲಾಗುವುದೆಂದರು.

ಶಂಕರ ಜಯಂತಿಯ ಬಗ್ಗೆ ಡಾ. ಬಿ ಯನ್. ಮಹಾಲಿಂಗ ಭಟ್ ಉಪನ್ಯಾಸ ನೀಡಿದರು. ಹಿರಿಯರ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಶಂಕರ ಪ್ರತಿಷ್ಠಾನ ಬಂಟ್ವಾಳದ ವತಿಯಿಂದ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ನಡೆಸುವ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಜಯರಾಮ ಭಂಡಾರಿ ಧರ್ಮಸ್ಥಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳಾದ ಭರತ್ ಕೆ ಮಂಗಳೂರು, ಬಾಲಕೃಷ್ಣ ಶೆಟ್ಟಿ. ಬಿ ಶಿವಕುಮಾರ್, ಗಣೇಶ ಆಚಾರ್ಯ ಜೆಪ್ಪು, ಭವಾನಿ ಶಂಕರ ಶೆಟ್ಟಿ ಪುತ್ತೂರು, ಚಂದ್ರಶೇಖರ ಆಳ್ವ ಪಡುಮಲೆ, ಉದಯಶಂಕರ ರೈ ಪುಣಚ, ಶ್ರೀಮತಿ ಸ್ವರ್ಣಲತಾ ಪುತ್ತೂರು, ,ಶ್ರೀಮತಿ ವಾರಿಜ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು. 

ನಿವೃತ್ತ ಶಿಕ್ಷಕಿ ಪ್ರೇಮ ವಿ.ಶೆಟ್ಟಿ ಪ್ರಾರ್ಥಿಸಿ ಬೆಳ್ತಂಗಡಿ ಘಟಕದ ಸಂಚಾಲಕ ವಸಂತ ಸುವರ್ಣ ಸ್ವಾಗತಿಸಿದರು. ಪ್ರತಿಷ್ಠಾನದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ಸಹ ಸಂಚಾಲಕ ಭಾಸ್ಕರ ಬಾರ್ಯ ವಂದಿಸಿದರು

- Advertisement -

Latest News

error: Content is protected !!