Thursday, June 4, 2026
Homeಅಪರಾಧಪುತ್ತೂರು: ಕಬಕ ಪೇಟೆಯಲ್ಲಿ ಸರಣಿ ಕಳ್ಳತನ...!

ಪುತ್ತೂರು: ಕಬಕ ಪೇಟೆಯಲ್ಲಿ ಸರಣಿ ಕಳ್ಳತನ…!

- Advertisement -
- Advertisement -

ಪುತ್ತೂರು : ಕಬಕ ರೋಟರಿ ಕಟ್ಟಡದಲ್ಲಿರುವ ‘ಹೋಟೆಲ್ ವಿಜಿ’ ಹಾಗೂ ‘ಕಬಕ ಜನರಲ್ ಸ್ಟೋರ್’ ನಿಂದ ನಗದು ಮತ್ತು ಸೊತ್ತುಗಳನ್ನು ಕಳ್ಳರು ಲೂಟಿಮಾಡಿದ್ದಾರೆ. ಕಬಕ ಪೇಟೆಯಲ್ಲಿ ಸರಣಿ ಕಳ್ಳತನ ನಡೆದಿದೆ.

ಶಟರ್ ನ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದು, ಅಲ್ಲಿದ್ದ ಹಣ ಮತ್ತು ಚಿಲ್ಲರೆ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ. ಅಲ್ಲಿರುವ ಗ್ಯಾರೇಜಿಗೂ ಕಳ್ಳರು ನುಗ್ಗಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇಲ್ಲಿನ ಅಂಗಡಿಯ ಜಗಲಿಯಲ್ಲಿ ಬಿಸ್ಕೆಟ್ ಪ್ಯಾಕೆಟ್ ಪತ್ತೆಯಾಗಿದೆ. ಕಬಕ ಜನರಲ್ ಸ್ಟೋರ್ ನಿಂದ ಕಳವು ಮಾಡಿದ ಬಿಸ್ಕೆಟ್ ಮತ್ತು ಚಾಕಲೇಟ್ ಪ್ಯಾಕ್ ಗಳನ್ನು ಪಕ್ಕದ ಅಂಗಡಿಯ ಜಗಲಿಯಲ್ಲಿ ಕಳ್ಳರು ಬಿಟ್ಟು ಹೋಗಿದ್ದಾರೆ. ಇಲ್ಲಿನ ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣಕ್ಕೆ ಸಂಬಂಧಪಟ್ಟ ಪರಿಶೀಲನೆ ನಡೆಸಿದ್ದಾರೆ. ಕಳವು ನಡೆದಿರುವ ಅಂಗಡಿಗಳಿಗೆ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!