Tuesday, May 7, 2024
Homeಕರಾವಳಿಮಂಗಳೂರುಮಂಗಳೂರು: ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ..! ಡಿಎನ್ಎ ಪರೀಕ್ಷೆಯ ವರದಿ ಬರುವ ಮುನ್ನವೇ ಉಸಿರಾಟದ...

ಮಂಗಳೂರು: ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ..! ಡಿಎನ್ಎ ಪರೀಕ್ಷೆಯ ವರದಿ ಬರುವ ಮುನ್ನವೇ ಉಸಿರಾಟದ ತೊಂದರೆಯಿಂದ ಹಸುಗೂಸು ಸಾವು…!

spot_img
- Advertisement -
- Advertisement -

ಮಂಗಳೂರು: ಒಂದು ತಿಂಗಳ ಹಿಂದೆ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣದಲ್ಲಿ ಸುದ್ದಿಯಾಗಿದ್ದ ಮಗುವೊಂದು ಡಿಎನ್ಎ ಪರೀಕ್ಷೆಯ ವರದಿ ಬರುವ ಮೊದಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಹಿಳೆಯೊಬ್ಬಳು ಕಳೆದ ಅ.15ರಂದು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ವೈದ್ಯರು ಹೆಣ್ಣು ಮಗು ಎಂದು ಹೇಳಿದ್ದರು. ಮಗುವಿಗೆ ಉಸಿರಾಟ ತೊಂದರೆ ಕಾರಣ ಐಸಿಯುನಲ್ಲಿಡಲಾಗಿತ್ತು. ಬಳಿಕ ಪೋಷಕರ ಕೈಗೆ ಮಗುವನ್ನು ನೀಡಲಾಗಿದೆ. ಈ ವೇಳೆ ಪರಿಶೀಲಿಸಿದಾಗ ಗಂಡು ಮಗುವನ್ನು ನೀಡಲಾಗಿತ್ತು. ಮಗು ಬದಲಾದ ಬಗ್ಗೆ ವೈದ್ಯರ ಗಮನಕ್ಕೆ ತಂದಾಗ, ಗಂಡು ಮಗುವೇ ಜನಿಸಿದೆ. ದಾಖಲೆಯಲ್ಲಿ ಹೆಣ್ಣು ಎಂದು ತಪ್ಪಾಗಿ ನಮೂದಿಸಲಾಗಿದೆ ಎಂದು ತಿಳಿಸಿದ್ದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಹೆಣ್ಣು ಮಗುವನ್ನೇ ನೀಡಲು ಆಗ್ರಹಿಸಿದ್ದರು. ಅಲ್ಲದೇ, ಈ ಬಗ್ಗೆ ಮಂಗಳೂರಿನ ಬಂದರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗುವಿನ ಪೋಷಕರ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮಗುವಿನ ಡಿಎನ್‌ಎ ಮಾದರಿಯನ್ನು ಪರೀಕ್ಷೆಗಾಗಿ ಹೈದರಾಬಾದ್​ಗೆ ಕಳುಹಿಸಿಕೊಡಲಾಗಿತ್ತು. ಆದರೆ, ಡಿಎನ್ಎ ಪರೀಕ್ಷೆಯ ವರದಿ ಬರುವ ಮುನ್ನವೇ ಮಗು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದೆ.

“ಮಗು ಪ್ರೀ ಮೆಚ್ಯೂರ್ಡ್ ಆಗಿ ಜನಿಸಿದ್ದು ಆರಂಭದಿಂದಲೇ ಉಸಿರಾಟದ ಸಮಸ್ಯೆ, ಕಡಿಮೆ ತೂಕ ಸೇರಿದಂತೆ ವಿವಿಧ ಗಂಭೀರ ಸಮಸ್ಯೆಗಳಿದ್ದವು. ಎಲ್ಲ ಅಗತ್ಯ ಚಿಕಿತ್ಸೆ ನೀಡಿಯೂ ಮಗು ಮಗು ಚಿಕಿತ್ಸೆ ಫಲಕಾರಿಯಗದೇ ಮೃತಪಟ್ಟಿದೆ ಎಂದು ಮಗುವಿನ ಆರೋಗ್ಯ ಸ್ಥಿತಿ ಬಗ್ಗೆ ಹೆತ್ತವರಿಗೆ ಹಲವು ಬಾರಿ ಮಾಹಿತಿ ನೀಡುತ್ತಾ ಬಂದಿದ್ದೆವು” ಎಂದು ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷಕ ಡಾ. ದುರ್ಗಾಪ್ರಸಾದ್ ತಿಳಿಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಮಗುವಿನ ಪೋಷಕರು, ” ಆಸ್ಪತ್ರೆಯವರು ಮಗುವಿನ ಆರೋಗ್ಯದ ಸಮಸ್ಯೆ ಬಗ್ಗೆ ಆರಂಭದಲ್ಲಿ ಹೇಳಿರಲಿಲ್ಲ, ಹೆಣ್ಣು ಮಗುವಿನ ಬದಲು ಗಂಡು ಮಗುವನ್ನು ನೀಡಿದ್ದರು. ಈಗ ಗಂಡು ಮಗುವನ್ನು ಕಳೆದುಕೊಂಡಿದ್ದೇವೆ ನಮಗೆ ನ್ಯಾಯ ಸಿಕ್ಕಿಲ್ಲ” ಎಂದು ಆರೋಪಿಸಿದ್ದಾರೆ.

- Advertisement -
spot_img

Latest News

error: Content is protected !!