Wednesday, July 15, 2026
Homeಕರಾವಳಿರೂಪೇಶ್ ಶೆಟ್ಟಿ ನಟನೆಯ‘ಅಧಿಪತ್ರ’ ಚಿತ್ರದ ಟೀಸರ್‌ ಮೇ 10ಕ್ಕೆ ರಿಲೀಸ್

ರೂಪೇಶ್ ಶೆಟ್ಟಿ ನಟನೆಯ‘ಅಧಿಪತ್ರ’ ಚಿತ್ರದ ಟೀಸರ್‌ ಮೇ 10ಕ್ಕೆ ರಿಲೀಸ್

- Advertisement -
- Advertisement -

ಬಿಗ್‌ಬಾಸ್ ಖ್ಯಾತಿಯ, ತುಳುನಾಡಿನ ರೂಪೇಶ್ ಶೆಟ್ಟಿ ನಟಿಸಿರುವ ‘ಅಧಿಪತ್ರ’ ಸಿನಿಮಾದ ಟೀಸರ್‌ ಮೇ 10ಕ್ಕೆ ಬಿಡುಗಡೆಯಾಗಲಿದೆ. ಇದೇ ವರ್ಷ ಸಿನಿಮಾ ಬಿಡುಗಡೆಗೊಳ್ಳಲಿದ್ದು, ಆಡಿಯೊ ಹಕ್ಕುಗಳನ್ನು ಲಹರಿ ಖರೀದಿ ಮಾಡಿದೆ. 

ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಭರದಿಂದ ಸಾಗಿದೆ. ಚಿತ್ರಕ್ಕೆ ಚಯನ್ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ. ರೂಪೇಶ್‌ಗೆ ಜೋಡಿಯಾಗಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ನಟಿಸಿದ್ದಾರೆ. ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ಎಂಕೆ‌ ಮಠ, ದೀಪಕ್ ರೈ, ಅನಿಲ್ ಉಪ್ಪಾಲ್, ಕಾರ್ತಿಕ್ ಭಟ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿನ ‘ಅಧಿಪತ್ರ’ ಸಿನಿಮಾವನ್ನು ಕೆ.ಆರ್. ಸಿನಿಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್, ಲಕ್ಷ್ಮೇಗೌಡ ‌ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. 

- Advertisement -

Latest News

error: Content is protected !!