Friday, June 5, 2026
Homeಕರಾವಳಿಮಂಗಳೂರುಬಿಸಿ ರೋಡ್ ನಲ್ಲಿ ಲಾಡ್ಜೊಂದರಲ್ಲಿ ಯುವಕ ಆತ್ಮಹತ್ಯೆ

ಬಿಸಿ ರೋಡ್ ನಲ್ಲಿ ಲಾಡ್ಜೊಂದರಲ್ಲಿ ಯುವಕ ಆತ್ಮಹತ್ಯೆ

- Advertisement -
- Advertisement -

ಬಂಟ್ವಾಳ;ತಾನು ತಂಗಿದ್ದ ಲಾಡ್ಜ್ ವೊಂದರಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿ ಸಿ ರೋಡಿನ ಕೃಷ್ಣಿಮಾ ಲಾಡ್ಜ್ ನಲ್ಲಿ ನಡೆದಿದೆ.ಮಂಗಳೂರಿನ ಅತ್ತಾವರ ನಿವಾಸಿ ಪ್ರಜ್ವಲ್ (30) ಆತ್ಮಹತ್ಯೆಗೆ ಶರಣಾದವರು.

ಪ್ರಜ್ವಲ್ ಮೇ. 5 ರಂದು ಬಿ ಸಿ ರೋಡ್ ನ ಖಾಸಗಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ನಲ್ಲಿ ರೂಂ ಮಾಡಿ ತಂಗಿದ್ದರು. ಮೇ. 6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದರು.ಇಂದು ಬೆಳಗ್ಗೆ ಬಾಗಿಲು ತೆಗೆಯದ ಹಿನ್ನೆಲೆ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃತೇದೇಹ ಪತ್ತೆಯಾಗಿದೆ.

ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚೆಗೆ ಮಾನಸಿಕವಾಗಿ ನೊಂದಿದ್ದರು. ಸಾಲ ತೀರಿಸಲಾಗದ ನೋವು ಹಾಗೂ ಪ್ರೇಮ ವೈಫಲ್ಯ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!