Sunday, June 7, 2026
Homeತಾಜಾ ಸುದ್ದಿತನ್ನ ಮನೆಯ ಆಭರಣ, ಹಣವನ್ನು ದೋಚಿ ಪರಾರಿಯಾದ ಖ್ಯಾತ ನಟಿ!

ತನ್ನ ಮನೆಯ ಆಭರಣ, ಹಣವನ್ನು ದೋಚಿ ಪರಾರಿಯಾದ ಖ್ಯಾತ ನಟಿ!

- Advertisement -
- Advertisement -

ಚೆನ್ನೈ: ತಮಿಳು ಟಿವಿ ಶೋ ದೇವಮಗಲ್ ಪಾತ್ರದಿಂದ ಜನಪ್ರಿಯವಾಗಿದ್ದ ನಟಿ ಸುಚಿತ್ರಾ ಮತ್ತು ಆಕೆಯ ಪತಿ ಸೇರಿ ತನ್ನ ಪತಿಯ ಮನೆಯನ್ನೇ ದೋಚಿದ ಘಟನೆ ನಡೆದಿದ್ದು, ನಟಿ ಮತ್ತು ಆಕೆಯ ಪತಿಗಾಗಿ ಚೆನ್ನೈ ಪೋಲೀಸರು ಶೋಧ ನಡೆಸಿದ್ದಾರೆ.

ಮಣಿಕಂದನ್

ಮಾದ್ಯಮ ವರದಿಯ ಪ್ರಕಾರ, ಲಾಕ್‌ಡೌನ್ ಸಮಯದಲ್ಲಿ ಕಿರುತೆರೆ ನಟಿ ಸುಚಿತ್ರಾ ಮಣಿಕಂದನ್ ಎಂಬ ನಟನೊಂದಿಗೆ ವಿವಾಹವಾಗಿದ್ದರು. ದಂಪತಿಗಳು ನಿವಾಸವನ್ನು ತಲುಪಿದಾಗ , ಅವರ ಪೋಷಕರು ಮೊದಲು ಅವರ ಮದುವೆಯನ್ನು ಒಪ್ಪಿರಲಿಲ್ಲ. ಆದರೆ ನಂತರ ಸಮ್ಮತಿಸಿದ್ದರು. ಸುಚಿತ್ರಾ ಮನೆಯಲ್ಲಿರುವ ಎಲ್ಲಾ ಹಣ ಮತ್ತು ಆಭರಣಗಳನ್ನು ನೋಡಿ ಆಕರ್ಷಿತನಾಗಿದ್ದಾಳೆ. ಸಾಂಕ್ರಾಮಿಕ ರೋಗದ ಕಾರಂಅ ಇಬ್ಬರಿಗೂ ಕೆಲಸವಿಲ್ಲದೆ ಹಣದ ಮುಗ್ಗಟ್ಟು ಉಂಟಾಗಿತ್ತು. ಆ ಕಾರಣಕ್ಕಾಗಿ ಆ ದಂಪತಿ ತಮ್ಮ ಸ್ವಂತ ಮನೆಯನ್ನೇ ದರೋಡೆ ಮಾಡಲು ಯೋಜಿಸಿದ್ದರು.

ಯೋಜನೆಯ ಭಾಗವಾಗಿ, ಪತಿ ತನ್ನ ಸ್ವಂತ ಹೆತ್ತವರನ್ನು ದೋಚುವುದಕ್ಕಾಗಿ ಅಲ್ಲೇ ಉಳಿದಿದ್ದರೆ ಪತ್ನಿ ಸುಚಿತ್ರಾ ನಗರದ ಹೊರಗೆ ತನಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ಚೆನ್ನೈನಿಂದ ಹೊರಟಿದ್ದಾಳೆ. ಆ ನಂತರ ಪತಿ ಮಣಿಕಂದನ್ ಮನೆಯಲ್ಲಿದ್ದ ಎಲ್ಲಾ ಆಭರಣ, ಹಣವನ್ನು ತೆಗೆದುಕೊಂಡು ಮನೆಯಿಂದ ಪರಾರಿಯಾಗಿದ್ದಾನೆ.

ಮಣಿಕಂದನ್ ಅವರ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ ಮತ್ತು ದರೋಡೆ ಹಿಂದೆ ದಂಪತಿಗಳ ಕೈವಾಡವಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಸಧ್ಯ ಪೋಲೀಸರು ಪತಿಯನ್ನು ಬಂಧಿಸಿದ್ದು ನಟಿ ಸುಚಿತ್ರಾ ಪರಾರಿಯಾಗಿದ್ದಾಳೆ.

- Advertisement -

Latest News

error: Content is protected !!