Saturday, January 16, 2021
Home ತಾಜಾ ಸುದ್ದಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಯುವ ವೈದ್ಯೆ

ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಯುವ ವೈದ್ಯೆ

- Advertisement -
- Advertisement -

ಕಲಬುರ್ಗಿ: ಇಲ್ಲಿನ ಧರ್ಮಾಪುರ ಗ್ರಾಮದ ಬಳಿ ಮಂಗಳವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವ ವೈದ್ಯೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈಕೆ ತಮ್ಮ ಬೈಕ್‌ನಲ್ಲಿ ಕಲಬುರ್ಗಿ ನಗರದಿಂದ ಮರತೂರಗೆ ಹೋಗುತ್ತಿದ್ದವೇಳೆ ಅಪಘಾತ ಸಂಭವಿಸಿದೆ.

ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ ಓದುತ್ತಿದ್ದ ಚಿತ್ತಾಪುರ ತಾಲ್ಲೂಕಿನ ಬಂಗೂರಿನ ಡಾ.ಪ್ರೀತಿ ಗೇಮು ಆಠೋಡ (28) ಮೃತಪಟ್ಟವರು.ಮುಖ ಹಾಗೂ ತೆಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವಾಗಿ ಪ್ರೀತಿ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -
- Advertisment -

Latest News

error: Content is protected !!