Saturday, January 16, 2021
Home ತಾಜಾ ಸುದ್ದಿ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೆಚ್.ನಾಗೇಶ್ ಗೆ ಮಹತ್ವದ ಹುದ್ದೆ

ಸಚಿವ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೆಚ್.ನಾಗೇಶ್ ಗೆ ಮಹತ್ವದ ಹುದ್ದೆ

- Advertisement -
- Advertisement -

ಬೆಂಗಳೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೆಚ್. ನಾಗೇಶ್ ಅವರನ್ನು ನೇಮಕ ಮಾಡಲಾಗಿದೆ. ಹೆಚ್. ನಾಗೇಶ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ನಾನ್ ಮಾಡಿದ್ದಾದ್ರೂ ಏನು..? ಯಾಕೆ ನನಗೆ ಮೋಸ ಮಾಡಿದ್ರೆ ಎಂಬುದಾಗಿ ಸಿಎಂ ಯಡಿಯೂರಪ್ಪ ಅವರ ಮುಂದೆಯೇ ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತ ಸಂದರ್ಭದಲ್ಲಿ ಹೆಚ್ ನಾಗೇಶ್ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು. ಇಂತಹ ಹೆಚ್ ನಾಗೇಶ್ ಅವರನ್ನು ಸಮಾಧಾನ ಮಾಡುವ ಸಲುವಾಗಿ ಸಿಎಂ ಯಡಿಯೂರಪ್ಪ ಅವರು, ನಾಗೇಶ್ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದಾರೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುನಿಕೃಷ್ಣ ಅವರನ್ನು ಮಾರುಕಟ್ಟೆ ಕಮ್ಯುನಿಕೇಷನ್ ಅಡ್ವರ್ಟೈಸ್ ಲಿಮಿಟೆಡ್ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸಿಎಂ ಸೂಚನೆ ನೀಡಿದ್ದಾರೆ.

- Advertisement -
- Advertisment -

Latest News

error: Content is protected !!