Sunday, October 18, 2026
Homeಪ್ರಮುಖ-ಸುದ್ದಿಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನ

ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನ

- Advertisement -
- Advertisement -

ಖ್ಯಾತ ಸಂಗೀತ ನಿರ್ದೇಶಕ ದೇವಾ (75) ಶನಿವಾರ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.

ದೇವನೇಶನ್ ಚೊಕ್ಕಲಿಂಗಂ ಎಂಬುದು ಅವರ ಮೂಲ ಹೆಸರಾಗಿದ್ದು, ದೇವಾ ಎಂದೇ ಪ್ರಸಿದ್ಧರಾಗಿದ್ದರು. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅವರು, ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರಗಳಿಗೂ ಸಂಗೀತ ಸಂಯೋಜಿಸಿದ್ದರು. ಸುಮಾರು ನಾಲ್ಕು ದಶಕಗಳ ಸಂಗೀತ ಪಯಣದಲ್ಲಿ 400ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ.

ತಮ್ಮ ವಿಶಿಷ್ಟ ‘ಗಾನಾ’ ಸಂಗೀತ ಶೈಲಿಯಿಂದ ಜನಪ್ರಿಯರಾಗಿದ್ದ ದೇವಾ, ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. 1992ರಲ್ಲಿ ‘ಕಲೈಮಾಮಣಿ’ ಪ್ರಶಸ್ತಿಗೆ ಭಾಜನರಾಗಿದ್ದರು. ‘ಆಸೈ’ ಚಿತ್ರದ ಸಂಗೀತಕ್ಕಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

ರಜನಿಕಾಂತ್ ಅಭಿನಯದ ‘ಬಾಷಾ’ ಚಿತ್ರದ ಸಂಗೀತಕ್ಕೂ ಪ್ರಶಸ್ತಿ ಪಡೆದಿದ್ದ ಅವರು, ಕನ್ನಡದ ‘ಅಮೃತವರ್ಷಿಣಿ’ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!