Sunday, June 7, 2026
Homeಕರಾವಳಿಉಡುಪಿಮಣಿಪಾಲ: ಎರಡು ಗೋಡೆಯ ನಡುವೆ ಸಿಕ್ಕಿಬಿದ್ದ ಗೋವು ರಕ್ಷಣೆ !

ಮಣಿಪಾಲ: ಎರಡು ಗೋಡೆಯ ನಡುವೆ ಸಿಕ್ಕಿಬಿದ್ದ ಗೋವು ರಕ್ಷಣೆ !

- Advertisement -
- Advertisement -

ಮಣಿಪಾಲದ ಒಬ್ಬರ ಮನೆಯಲ್ಲಿ ಮನೆಯ ಗೋಡೆಗೆ ಹಾಗೂ ಕಂಪೌಡ್ ಗೋಡೆಯ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ದನವನ್ನು ಕಾರ್ಯಾಚರಣೆ ಮೂಲಕ ಅಗ್ನಿಶಾಮಕ ದಳ ಮತ್ತು ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರು ಏನು ಘಾಸಿಯಗದಂತೆ ಹೊರ ತೆಗೆದ ಘಟನೆ ನಡೆದಿದೆ.

ಮಣಿಪಾಲದ ಆರ್ ಎಸ್ ಬಿ ಸಭಾಭವನದ ಹಿಂಭಾಗದ ಮನೆಯ ಎರಡು ಗೋಡೆಗಳ ಸಂದಿನಲ್ಲಿ ಈ ದನ ಆಹಾರ ಅರಸಿ ಹೋಗಿತ್ತು. ತುಂಬಾ ಇಕ್ಕಟ್ಟಾದ ಜಾಗಕ್ಕೆ ಹೋಗಿ ಹೊರಬರಲಾಗದೆ ಒದ್ದಾಡುತ್ತಿತ್ತು.

ದೊಡ್ಡ ಗಾತ್ರದ ಡ್ರಿಲ್ಲಿಂಗ್ ಮೆಷಿನ್ ಬಳಸಿ ದನ ಸುರಕ್ಷಿತವಾಗಿ ಹೊರ ಬರಲು ಜಾಗ ಮಾಡಿ ಕೊಡಲಾಯಿತು. ಜಿಲ್ಲಾ ನಾಗರಿಕ ಸಮಿತಿ ಹಾಗೂ ಅಗ್ನಿಶಾಮಕ ದಳದ ತ್ವರಿತಗತಿಯ ಜಂಟಿ ಕಾರ್ಯಾಚರಣೆಯು ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ಬಳಿಕ ಪಶುವೈದ್ಯ ಡಾ. ಪ್ರಶಾಂತ್ ಶೆಟ್ಟಿ ಗೋವಿಗೆ ಚಿಕಿತ್ಸೆ ನೀಡಿದ್ದಾರೆ.

- Advertisement -

Latest News

error: Content is protected !!