Monday, May 6, 2024
Homeಕರಾವಳಿಎರಡು ಡೋಸ್ ಆಗಿದ್ದಲ್ಲಿ ಮಾತ್ರ ಇನ್ನು ಮುಂದೆ ಮಂಗಳೂರು ನಗರಪಾಲಿಕೆ ಆವರಣಕ್ಕೆ ಪ್ರವೇಶ !

ಎರಡು ಡೋಸ್ ಆಗಿದ್ದಲ್ಲಿ ಮಾತ್ರ ಇನ್ನು ಮುಂದೆ ಮಂಗಳೂರು ನಗರಪಾಲಿಕೆ ಆವರಣಕ್ಕೆ ಪ್ರವೇಶ !

spot_img
- Advertisement -
- Advertisement -

ಮಂಗಳೂರು ನಗರಪಾಲಿಕೆ ಇದ್ದಕ್ಕಿದ್ದಂತೆ ಆದೇಶವೊಂದನ್ನು ಸಾರ್ವಜನಿಕರಿಗೆ ನೀಡಿದೆ. ಅದೇನೆಂದರೆ ಮಹಾನಗರ ಪಾಲಿಕೆ ಕಚೇರಿ ಒಳಗೆ ಪ್ರವೇಶಿಸಲು 2ಡೋಸ್ ಲಸಿಕೆ ಕಡ್ಡಾಯ ಎಂಬ ಆದೇಶ ಹೊರಡಿಸಿದೆ.

ಎರಡು ಡೋಸ್ ಲಸಿಕೆ ಪಡೆಯದೆ ಇದ್ದವರು ಲಸಿಕೆಯನ್ನು ಪಡೆಯಲೇಬೇಕು.ಪಡೆದಿಲ್ಲವೆಂದರೆ ಪಾಲಿಕೆ ಕಚೇರಿ ಒಳಗಡೆ ಬಿಡಬಾರದೆಂದು ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.

ಪಾಲಿಕೆ ದ್ವಾರದಲ್ಲಿ ಆರೋಗ್ಯ ಇಲಾಖೆಯಿಂದ ಲಸಿಕೆ ನೀಡಲಾಗಿತ್ತು. ಅಲ್ಲಿನ ಒಂದಷ್ಟು ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿ ಕೆಲಸಕ್ಕೆ ಬೆಳಿಗ್ಗೆ ಆಗಮಿಸಿದ ನೂರಾರು ಮಂದಿ ಪ್ರವೇಶ ಸಿಗದೆ ದ್ವಾರದಲ್ಲಿ ನಿಂತು ಆಕ್ರೋಶವನ್ನು ಹೊರಹಾಕಿದ್ದಾರೆ.

ಹಾಗೆ 2ಡೋಸ್ ಲಸಿಕೆ ಆಗಿಲ್ಲವೆಂದರೆ ಇನ್ನುಮುಂದೆ ಮಾಲ್ ಗಳಿಗೂ ಪ್ರವೇಶ ನೀಡಬಾರದೆಂದು ಹೇಳಿದ್ದಾರೆ. 2 ಡೋಸ್ ಲಸಿಕೆ ಆದ ಗ್ರಾಹಕರನ್ನು ಮಾತ್ರ ಒಳಗೆ ಬಿಡಲಾಗಿತ್ತು. ಎರಡು ಡೋಸ್ ಹಾಕದೆ ಇರುವ ಗ್ರಾಹಕರನ್ನು ಮರಳಿ ವಾಪಸು ಕಳುಹಿಸಿದ್ದಾರೆ.

- Advertisement -
spot_img

Latest News

error: Content is protected !!