Monday, May 6, 2024
Homeಕರಾವಳಿಉಡುಪಿಶಾಲಾ ಮಕ್ಕಳಿಗೆ ಇನ್ನೂ ಜಮೆಯಾಗದ ಕುಕ್ಕಿಂಗ್ ಕಾಸ್ಟ್ !

ಶಾಲಾ ಮಕ್ಕಳಿಗೆ ಇನ್ನೂ ಜಮೆಯಾಗದ ಕುಕ್ಕಿಂಗ್ ಕಾಸ್ಟ್ !

spot_img
- Advertisement -
- Advertisement -

ಕಾರ್ಕಳ: ಕೋರೋನ ಸಂದರ್ಭದಲ್ಲಿ ಭೌತಿಕ ತರಗತಿಗಳಿಂದ ದೂರವಿದ್ದು ಆನ್ ಲೈನ್ ಮೂಲಕವೇ ತರಗತಿಗಳು ನಡೆಯುತ್ತಿದ್ದವು. ರಾಜ್ಯದ ಸರಕಾರಿ ಶಾಲಾ ಮಕ್ಕಳಿಗೆ 2 ತಿಂಗಳ ಕುಕ್ಕಿಂಗ್‌ ಕಾಸ್ಟ್‌ ನ್ನು ಹಣದ ರೂಪದಲ್ಲಿ ನೀಡುವುದಾಗಿ ಸರಕಾರ ಹೇಳಿತ್ತು. ಇದೀಗ 6 ತಿಂಗಳು ಕಳೆದರೂ ಹಣ ಮಕ್ಕಳ ಖಾತೆಗೆ ಇನ್ನೂ ಸೇರಿಲ್ಲ.

ರಾಜ್ಯದಲ್ಲಿ ಇದುವರೆಗೆ 25 ಸಾವಿರ ಮಕ್ಕಳ ಖಾತೆಗೆ ಮಾತ್ರ ಜಮೆ ಆಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಜೂನ್‌ ತಿಂಗಳ 50 ದಿನಗಳ ಬಿಸಿಯೂಟ ತಯಾರಿಗೆ ತಗಲುವ ವೆಚ್ಚವನ್ನು ಮಕ್ಕಳ ಖಾತೆಗೆ ಜಮೆ ಮಾಡಬೇಕಿತ್ತು.

ಜುಲೈ 15ರಂದು ಶಾಲೆಗಳಿಗೆ ನೋಟಿಸ್ ಕಳುಹಿಸಿತ್ತು. ಕೋವಿಡ್‌ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಪೌಷ್ಟಿಕಾಂಶ ಅಗತ್ಯವಿದ್ದು ಅದಕ್ಕೆ ಈ ಮೊತ್ತವನ್ನು ಬಳಸಬೇಕು ಎಂದೂ ಕೂಡ ಸೂಚಿಸಲಾಗಿತ್ತು.

ಆಧಾರ್‌ ಅಥೆಂಟಿಕೇಶನ್‌ ಆದ ಎಲ್ಲ ಮಕ್ಕಳದ್ದು ಪೇಮೆಂಟ್‌ ಮಾಡುತ್ತಿದ್ದೇವೆ ಎಂದು ಹೇಳಿದೆ. ಅಧಾರ್‌ ಮತ್ತು ಬ್ಯಾಂಕ್‌ ವಿವರ ಹೊಂದಾಣಿಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಅದೂ ಸರಿ ಇದ್ದಲ್ಲಿ ಪರಿಗಣಿಸಿ, ಅವಕಾಶವಿದ್ದ ಎಲ್ಲ ಮಕ್ಕಳಿಗೂ ಸೌಲಭ್ಯ ಒದಗಿಸುತ್ತಿದ್ದೇವೆ ಎಂದಿದ್ದಾರೆ.

- Advertisement -
spot_img

Latest News

error: Content is protected !!