Sunday, May 19, 2024
HomeWorldನವಮಂಗಳೂರು ಬಂದರಿಗೆ ಬಂತು 8ನೇ ಬೃಹತ್ ಪ್ರವಾಸಿ ಹಡಗು

ನವಮಂಗಳೂರು ಬಂದರಿಗೆ ಬಂತು 8ನೇ ಬೃಹತ್ ಪ್ರವಾಸಿ ಹಡಗು

spot_img
- Advertisement -
- Advertisement -

ಮಂಗಳೂರು: ನವಮಂಗಳೂರು ಬಂದರಿಗೆ ಈ ವರ್ಷದ 8ನೇ ಐಷಾರಾಮಿ ಕ್ರೂಸ್‌ “ಎಂಎಸ್‌ ಇನ್‌ಸೈನಿಯಾ’ ರವಿವಾರದಂದು ಆಗಮಿಸಿದ್ದು,  ವಿದೇಶೀ ಪ್ರವಾಸಿಗರಿಗರನ್ನು  ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ದ ವತಿಯಿಂದ ಭರತನಾಟ್ಯ, ಯಕ್ಷಗಾನ ಸಹಿತ ಭಾರತೀಯ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಪರಿಚಯಿಸಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ನಾರ್ವೇಜಿಯನ್‌ ಕ್ರೂಸ್‌ ಲೈನರ್‌ 509 ಪ್ರಯಾಣಿಕರು ಮತ್ತು 407 ಸಿಬಂದಿ ಒಳಗೊಂಡಿದೆ. ಎನ್‌ಎಂಪಿಎಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕ್ಷಿಪ್ರ ಕ್ಲಿಯರಿಂಗ್‌ ವ್ಯವಸ್ಥೆ ಸೌಲಭ್ಯ ಅಳವಡಿಸಲಾಗಿದೆ.

ಕಾರ್ಕಳ ಗೋಮಟೇಶ್ವರ ಬೆಟ್ಟ, ಮೂಡಬಿದಿರೆಯ ಸಾವಿರ ಕಂಬಗಳ ಬಸದಿ, ಸೋನ್ಸ್‌ ಫಾರ್ಮ್, ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೈಂಟ್‌ ಅಲೋಶಿಯಸ್‌ ಚಾಪೆಲ್‌, ಸ್ಥಳೀಯ ಮಾರುಕಟ್ಟೆ ಮತ್ತು ಸಾಂಪ್ರದಾಯಿಕ ಮನೆಗಳಂತಹ ವಿವಿಧ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು.

- Advertisement -
spot_img

Latest News

error: Content is protected !!