Thursday, June 4, 2026
Homeತಾಜಾ ಸುದ್ದಿಕೊರೊನಾ ಸ್ಫೋಟ: ಮಹಾರಾಷ್ಟ್ರದಲ್ಲಿ ಒಂದೇ ದಿನ 2,940 ಪ್ರಕರಣ ಪತ್ತೆ

ಕೊರೊನಾ ಸ್ಫೋಟ: ಮಹಾರಾಷ್ಟ್ರದಲ್ಲಿ ಒಂದೇ ದಿನ 2,940 ಪ್ರಕರಣ ಪತ್ತೆ

- Advertisement -
- Advertisement -

ಮುಂಬೈ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶುಕ್ರವಾರ ಹೆಚ್ಚು ಕಡಿಮೆ ಮೂರು ಸಾವಿರ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 2,940 ಪ್ರಕರಣಗಳು ಕಂಡುಬಂದಿವೆ.

ಭಯದ ವಾತಾವರಣ
ಒಂದೇ ದಿನ ಹೆಚ್ಚು ಕಡಿಮೆ 3 ಸಾವಿರ ಪ್ರಕರಣಗಳು ಪತ್ತೆಯಾಗಿದ್ದರಿಂದ ಮಹಾರಾಷ್ಟ್ರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ 2,940 ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು 44,582 ಪ್ರಕರಣಗಳು ದಾಖಲಾದಂತಾಗಿದೆ. ಅಲ್ಲದೆ ಒಂದೇ ದಿನ 63 ಜನ ಸಾವನ್ನಪ್ಪಿದ್ದು, ಈವರಗೆ ಮಹಾರಾಷ್ಟ್ರದಲ್ಲಿ ಒಟ್ಟು 1,517 ಜನ ಸಾವನ್ನಪ್ಪಿದ್ದಾರೆ ಎಂಬ ಅಂಕಿ ಅಂಶ ಹೊರ ಬಿದ್ದಿದೆ.

3.33 ಲಕ್ಷ ಜನರ ತಪಾಸಣೆ
ಕಳೆದ ಆರು ದಿನಗಳಿಂದ ಮಹಾರಾಷ್ಟ್ರದಲ್ಲಿ ಪ್ರತಿ ದಿನ 2 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈವೆರೆಗೆ 3.33 ಲಕ್ಷ ಜನರನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ ಎಂದು ಮಹಾರಾಷ್ಟ್ರದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮದ್ಯವನ್ನು ಹೋಮ್ ಡೆಲಿವರಿ
ಒಟ್ಟು ಪ್ರಕರಣಗಳಲ್ಲಿ ಕನಿಷ್ಟ 27,251 ಪ್ರಕರಣಗಳು ಮುಂಬೈ ಒಂದರಲ್ಲೇ ಪತ್ತೆಯಾಗಿವೆ. ಅಲ್ಲದೆ 909 ಜನ ಸಾವನ್ನಪ್ಪಿದ್ದಾರೆ. ಇದೆಲ್ಲದರ ಮಧ್ಯೆ ಮುಂಬೈ ಪ್ರಾಧಿಕಾರ ಇಂದು ಮದ್ಯವನ್ನು ಹೋಮ್ ಡೆಲಿವರಿ ಮಾಡುವ ನಿರ್ಧಾರ ಕೈಗೊಂಡಿದ್ದು, ಕಂಟೋನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲ ಕಡೆ ಮದ್ಯ ಹೋಮ್ ಡೆಲಿವರಿ ಮಾಡಲು ಮುಂದಾಗಿದೆ.

- Advertisement -

Latest News

error: Content is protected !!