Saturday, June 6, 2026
Homeಇತರಹಿರಿಯ ಕವಿ ನಾಡೋಜ ಚನ್ನವೀರ ಕಣವಿಗೆ ಪತ್ನಿ, ಲೇಖಕಿ, ಕಥೆಗಾರ್ತಿ ಶಾಂತಾದೇವಿ ಇನ್ನಿಲ್ಲ

ಹಿರಿಯ ಕವಿ ನಾಡೋಜ ಚನ್ನವೀರ ಕಣವಿಗೆ ಪತ್ನಿ, ಲೇಖಕಿ, ಕಥೆಗಾರ್ತಿ ಶಾಂತಾದೇವಿ ಇನ್ನಿಲ್ಲ

- Advertisement -
- Advertisement -

ಬೆಳಗಾವಿ: ಖ್ಯಾತ ಕವಿ ಚೆನ್ನವೀರ ಕಣವಿ ಅವರ ಪತ್ನಿ, ಹಿರಿಯ ಲೇಖಕಿ ಶಾಂತಾದೇವಿ ಕಣವಿ (88) ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ನಿಧನರಾದರು.

ಲೇಖಕಿ ಮತ್ತು ಕಥೆಗಾರ್ತಿಯಾಗಿದ್ದ ಶಾಂತಾದೇವಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.

ಮೃತರು ನಾಲ್ವರು ಗಂಡು ಮಕ್ಕಳು ಹಾಗು ಒಬ್ಬ ಹೆಣ್ಣು ಮಗಳನ್ನು ಅಗಲಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಗಿಡ್ಡನವರ್ ಮನೆತನದವರಾಗಿದ್ದ ಶಾಂತಾದೇವಿ ಅವರು ಚನ್ನವೀರ ಕಣವಿ ಅವರನ್ನು ವಿವಾಹವಾಗಿ ಅವರ ಸಾಹಿತ್ಯ ಸೃಷ್ಟಿಗೆ ಸ್ಪೂರ್ತಿಯಾಗಿದ್ದರು. ಮೃತರ ಅಂತ್ಯಕ್ರಿಯೆ ಇಂದು ಧಾರವಾಡದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!