Sunday, June 7, 2026
Homeಇತರನಂಜನಗೂಡು: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನು ಈಗ ಆಕೆಯ ಪುತ್ರಿಯೊಂದಿಗೆ ಪರಾರಿ

ನಂಜನಗೂಡು: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನು ಈಗ ಆಕೆಯ ಪುತ್ರಿಯೊಂದಿಗೆ ಪರಾರಿ

- Advertisement -
- Advertisement -

ಮೈಸೂರು: ತನ್ನ ಮೃತ ಸಹೋದರನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಕೊನೆಗೆ ಆಕೆಯ ಹಿರಿಯ ಪುತ್ರಿಯೊಂದಿಗೆ ಪರಾರಿಯಾಗಿರುವ ವಿಲಕ್ಷಣ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವುಹುಂಡಿ ಎಂಬಲ್ಲಿ ನಡೆದಿದೆ.

ಚಾಮಲಾಪುರಹುಂಡಿಯ ಕೃಷ್ಣ ಎಂಬಾತ ತನ್ನ ಅತ್ತಿಗೆ ಜಯಲಕ್ಷ್ಮಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನೆಂದು ಹೇಳಲಾಗಿದೆ. ಇತ್ತೀಚೆಗೆ ಇಬ್ಬರ ನಡುವೆ ವಿರಸ ತಲೆದೋರಿದ್ದು, ಈ ಕುರಿತು ನ್ಯಾಯ ಪಂಚಾಯಿತಿ ನಡೆದಿತ್ತೆನ್ನಲಾಗಿದೆ.

ಕೃಷ್ಣ ಜಯಲಕ್ಷ್ಮಿಯ ಮೂವರು ಹೆಣ್ಣು ಮಕ್ಕಳ ಪೈಕಿ ಹಿರಿಯ ಪುತ್ರಿಯೊಂದಿಗೂ ಅಕ್ರಮ ಸಂಬಂಧ ಹೊಂದಿದ್ದನೆನ್ನಲಾಗಿದ್ದು, ಮೇ 17ರಂದು ಆಕೆಯೊಂದಿಗೆ ಪರಾರಿಯಾಗಿದ್ದಾನೆ. ಇದೀಗ ಜಯಲಕ್ಷ್ಮಿ ತನ್ನ ಅಪ್ರಾಪ್ತ ಪುತ್ರಿಯನ್ನು ಅಪಹರಿಸಿರುವ ಕೃಷ್ಣನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!