Sunday, June 7, 2026
Homeಕರಾವಳಿಉಡುಪಿಕೊರೋನಾ ಆರ್ಭಟ: ಉಡುಪಿಯಲ್ಲಿ 5 ಮಂದಿಯಲ್ಲಿ ಕೊರೋನ ಸೋಂಕು ದೃಢ

ಕೊರೋನಾ ಆರ್ಭಟ: ಉಡುಪಿಯಲ್ಲಿ 5 ಮಂದಿಯಲ್ಲಿ ಕೊರೋನ ಸೋಂಕು ದೃಢ

- Advertisement -
- Advertisement -

ಉಡುಪಿ: ಕಡಲತಡಿ ಉಡುಪಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ತನ್ನ ಅರ್ಭವನ್ನು ಮುಂದುವರೆಸುತ್ತಲೇ ಇದೆ. ಇಂದು ಮಧ್ಯಾಹ್ನ ಬಂದಿರುವ ವರದಿಯ ಪ್ರಕಾರ 5 ಜನರಲ್ಲಿ ಕೊರೋನ ವೈರಸ್ ಸೋಂಕು ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಮುಂಬೈಯಿಂದ ಆಗಮಿಸಿದ ನಾಲ್ವರು ಮತ್ತು ವಿದೇಶದಿಂದ ಆಗಮಿಸಿದ ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ಅವರು ಹೇಳಿದ್ದಾರೆ.

37, 55, 31 ವರ್ಷ ವಯಸ್ಸಿನ ಮೂವರು ಪುರುಷರು ಹಾಗೂ 48 ಮತ್ತು 34 ವರ್ಷದ ಇಬ್ಬರು ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ನಿನ್ನೆ ಮದ್ಯಾಹ್ನ ಬಂದ ಹೆಲ್ತ್ ಬುಲೆಟಿನ್ ನಲ್ಲಿ ಯಾವುದೇ ಕೊರೋನಾ ಪ್ರಕರಣ ಕಂಡು ಬಂದಿರಲಿಲ್ಲ. ಆದರೆ ಸಂಜೆ ಬಂದ ವರದಿಯಲ್ಲಿ ಜಿಲ್ಲೆಯ ಜನತೆಗೆ ಶಾಕ್ ಇತ್ತು. ಮಹಾರಾಷ್ಟ್ರದಿಂದ ಬಂದ ಮೂವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು.

- Advertisement -

Latest News

error: Content is protected !!