Sunday, June 14, 2026
Homeಕರಾವಳಿಕರಾವಳಿಗೆ ಕೊರೊನಾ ಮಹಾ-ಕಂಟಕ: ಇಂದು ದ.ಕ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢ

ಕರಾವಳಿಗೆ ಕೊರೊನಾ ಮಹಾ-ಕಂಟಕ: ಇಂದು ದ.ಕ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢ

- Advertisement -
- Advertisement -

ಮಂಗಳೂರು: ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕರ್ನಾಟಕದ ರಾಜ್ಯದ ಜೊತೆ ಕರಾವಳಿ ಜಿಲ್ಲೆಗಳನ್ನು ಕೂಡ ಕೊರೊನ ಮಹಾಮಾರಿ ಬೆಂಬಿಡದ ಬೇತಾಳನಂತೆ ಕಾಡುತ್ತಿದೆ . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 2 ಮಂದಿಗೆ ಕೊರೊನಾ ಪಾಸಿಟಿವ್‌ ಆಗಿರುವುದು ವರದಿಯಾಗಿದೆ.

ದ.ಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಇದೀಗ 64 ಕ್ಕೆ ಏರಿದೆ. ಇಂದು ಪತ್ತೆಯಾದ ಒಂದು ಪ್ರಕರಣ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಾಗಿದ್ದು, ಗ್ರಾಮದ 41 ವರ್ಷದ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಸದ್ಯ ಶಿರ್ಲಾಲು ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ ಐವರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ ಇಂದು ಒಂದೇ ದಿನ 196 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ1939ಕ್ಕೆ ಏರಿಕೆಯಾಗಿದೆ.

  • ಯಾದಗಿರಿ 72
  • ರಾಯಚೂರು 39
  • ಮಂಡ್ಯ 28
  • ಚಿಕ್ಕಬಳ್ಳಾಪುರ 20
  • ಗದಗ 16
  • ಬೆಂಗಳೂರು 04
  • ಹಾಸನ 04
  • ಉತ್ತರಕನ್ನಡ 03
  • ದಾವಣಗೆರೆ 03
  • ದಕ್ಷಿಣಕನ್ನಡ 02
  • ಕೋಲಾರ 02
  • ಧಾರವಾಡ 01
  • ಬೆಳಗಾವಿ 01
  • ಕಲಬುರ್ಗಿ 01
  • ಉಡುಪಿ 05

- Advertisement -

Latest News

error: Content is protected !!