Tuesday, October 13, 2026
Homeಅಪರಾಧಕಾರ್ಕಳದ ಯೂತ್ ಕಾಂಗ್ರೆಸ್ ನಾಯಕನಿಗೆ ಕೊಲೆ ಬೆದರಿಕೆ; ಆರೋಪಿಯ ಬಂಧನ

ಕಾರ್ಕಳದ ಯೂತ್ ಕಾಂಗ್ರೆಸ್ ನಾಯಕನಿಗೆ ಕೊಲೆ ಬೆದರಿಕೆ; ಆರೋಪಿಯ ಬಂಧನ

- Advertisement -
- Advertisement -

ಕಾರ್ಕಳ: ಯೂತ್ ಕಾಂಗ್ರೆಸ್ ನಾಯಕ ಇನ್ನಾ ಯೋಗೇಶ್ ಆಚಾರ್ಯ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಚಾರ ಗ್ರಾಮದ ಕೃಷ್ಣ ನಾಯಕ್ ಎಂಬಾತನನ್ನು ಹೆಬ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ತಡರಾತ್ರಿ ಪೊಲೀಸರು ಕೃಷ್ಣ ನಾಯಕ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಂಧನದ ಬಳಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಚಾರ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರಾಗಿರುವ ಕೃಷ್ಣ ನಾಯಕ್, ಈ ಹಿಂದೆ ಕೂಡ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ “ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಹುಟ್ಟಿದವರು” ಎಂಬ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!