Thursday, June 4, 2026
Homeಕರಾವಳಿಕಾಸರಗೋಡುಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಖ್ಯಾತ ಟಿಕ್ ಟಾಕ್ ಸ್ಟಾರ್ ಬಂಧನ

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಖ್ಯಾತ ಟಿಕ್ ಟಾಕ್ ಸ್ಟಾರ್ ಬಂಧನ

- Advertisement -
- Advertisement -

ಕೇರಳ : ಆಂಧ್ರ ಪ್ರದೇಶದ ಟಿಕ್​ಟಾಕ್​ ಸ್ಟಾರ್​ ಫನ್​ ಬಕೆಟ್​ ಭಾರ್ಗವನ ರೀತಿಯಲ್ಲೇ ಮತ್ತೊಬ್ಬ ಟಿಕ್​ಟಾಕ್​ ಸ್ಟಾರ್​ನ ಕರಾಳ ಮುಖವಾಡ ಕಳಚಿಬಿದ್ದಿದೆ. ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿರುವ ಆರೋಪದ ಮೇಲೆ ಕೇರಳದ ತ್ರಿಸ್ಸೂರ್​ ಮೂಲದ ಟಿಕ್​ಟಾಕ್​ ಸ್ಟಾರ್​ನನ್ನು ನಿನ್ನೆ  ಬಂಧಿಸಲಾಗಿದೆ.

ಬಂಧಿತನನ್ನು 19 ವರ್ಷದ ಅಂಬಿಲಿ ಅಲಿಯಾಸ್​ ವಿಘ್ನೇಶ್ ಕೃಷ್ಣ ಎಂದು ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆ ಮತ್ತು ಪೊಕ್ಸೊ ಕಾಯ್ದೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿವರಣೆಗೆ ಬರುವುದಾದರೆ, ವಿಘ್ನೇಶ್ ಕೃಷ್ಣ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳನ್ನು ಭೇಟಿ ಮಾಡಿ ಮಾಡಿದ್ದ. ಇಬ್ಬರ ಭೇಟಿ ನಂತರದ ದಿನಗಳಲ್ಲಿ ಒಬ್ಬರಿಗೊಬ್ಬರು ಎದುರು-ಬದುರಾಗುವಷ್ಟು ಗಾಢವಾಯಿತು ಮತ್ತು ಇಬ್ಬರ ನಡುವೆ ಸ್ನೇಹ ಬೆಳೆಯಿತು.

ಇದರ ನಡುವೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಹುಡುಗಿಯನ್ನು ತನ್ನ ಮನೆಗೆ ಕರೆದೊಯ್ದು ಆಕೆಯ ಮೇಲೆ ವಿಘ್ನೇಶ್ ಕೃಷ್ಣ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.

ಹುಡುಗಿ ಗರ್ಭಿಣಿಯಾಗಿರುವುದು ಮನೆಯವರಿಗೆ ತಿಳಿದು ದೂರು ನೀಡುತ್ತಿದ್ದಂತೆ ವಿಘ್ನೇಶ್ ಪರಾರಿಯಾಗಿದ್ದ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಇದೇ ವೇಳೆಯಲ್ಲಿ ಆತ ವಿದೇಶಕ್ಕೆ ಹಾರಲು ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಪಾಸ್​ಪೋರ್ಟ್​ ರೆಡಿ ಆಗಿದೆ ಎಂದು ಆತನ ಕುಟುಂಬಕ್ಕೆ ತಿಳಿಸಲಾಗಿತ್ತು.

ವಿಘ್ನೇಶ್ ತಂದೆ ಪಾಸ್​ಪೋರ್ಟ್​ ಕೊಡಲು ಅವನಿದ್ದ ಸ್ಥಳಕ್ಕೆ ಹೋಗುವುದನ್ನು ಹಿಂಬಾಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿ ವಿಚಾರಣೆ ನಡೆಯುತ್ತಿದೆ.

ಚೈನೀಸ್​ ಆಯಪ್​ಗಳು ಬ್ಯಾನ್​ ಆಗುವ ಮುನ್ನ ವಿಘ್ನೇಶ್ ಕೃಷ್ಣ ತನ್ನ ಟಿಕ್​ಟಾಕ್​ ವಿಡಿಯೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಖ್ಯಾತಿ ಗಳಿಸಿದ್ದ. ಸಾಕಷ್ಟು ಫಾಲೋವರ್ಸ್​ಗಳನ್ನು ಸಹ ಈತ ಹೊಂದಿದ್ದ.

- Advertisement -

Latest News

error: Content is protected !!