Saturday, May 11, 2024
Homeಕರಾವಳಿಕೊಣಾಜೆ ಪೊಲೀಸರ ಭರ್ಜರಿ ಕಾರ್ಯಾಚರಣೆ : ನಿಷೇಧಿತ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರ ಬಂಧನ

ಕೊಣಾಜೆ ಪೊಲೀಸರ ಭರ್ಜರಿ ಕಾರ್ಯಾಚರಣೆ : ನಿಷೇಧಿತ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರ ಬಂಧನ

spot_img
- Advertisement -
- Advertisement -

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಬೆಂಗಳೂರಿನಲ್ಲಿ ಖರೀದಿಸಿ ಕಾಸರಗೋಡಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕೊಣಾಜೆ ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ.

ಕಾಸರಗೋಡಿನ ಶಫೀಕ್‌ ಹಾಗೂ ಅಲ್ತಾಫ್‌ ಬಂಧಿತರು. ಆರೋಪಿಗಳಿಂದ ಒಟ್ಟು 65 ಗ್ರಾಂ ತೂಕದ ಸುಮಾರು  3.90 ಲಕ್ಷ ಮೌಲ್ಯದ ಎಂಡಿಎಂ, ಸ್ವಿಫ್ಟ್‌ ಕಾರು, ಸುಮಾರು 11 ಸಾವಿರ ಮೌಲ್ಯದ 4 ಮೊಬೈಲ್‌‌ ಸಹಿತ ಒಟ್ಟು  9.01 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಪ್ಪಿನಂಗಡಿ ಕಡೆಯಿಂದ ಕೇರಳ ರಾಜ್ಯಕ್ಕೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಅಕ್ರಮವಾಗಿ ಮೆಲ್ಕಾರ್‌‌ ಮುಡಿಪು, ನಾಟೆಕಲ್‌‌ ರಸ್ತೆ ಮಾರ್ಗವಾಗಿ ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ, ಪಿಎಸ್‌ಐ ಮಲ್ಲಿಕಾರ್ಜುನ ಬಿರದಾರ ಹಾಗೂ ಸಿಬ್ಬಂದಿ ಮಂಜನಾಡಿ ಗ್ರಾಮದ ನಾಟೆಕಲ್‌‌ ವಿಜಯನಗರ ಎಂಬಲ್ಲಿ ಆರೋಪಿಗಳ ಕಾರನ್ನು ತಡೆದು ನಿಲ್ಲಿಸಿದರು. ಈ ವೇಳೆ ಪರಿಶೀಲನೆ ನಡೆಸಿ ಆರೋಪಿಗಳ ಸಹಿತ ಮಾದಕವಸ್ತು ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್‌‌ ಮಾರ್ಗದರ್ಶನದಲ್ಲಿ, ಎಸಿಪಿ ನಟರಾಜ್‌‌, ಕೊಣಾಜೆ ಪೊಲೀಸ್‌ ನಿರೀಕ್ಷಕ ಪ್ರಕಾಶ್‌ ದೇವಾಡಿಗ, ಪಿಎಸ್‌‌ಐ ಮಲ್ಲಿಕಾರ್ಜುನ ಬಿರದಾರ, ಶರಣಪ್ಪ ಭಂಡಾರಿ, ಎಎಸ್‌ಐ ಮೋಹನ್‌‌, ಸಿಬ್ಬಂದಿ ನಾಗರಾಜ ಲಮಾಣಿ, ಅಶೋಕ್‌, ಪುರುಷೋತ್ತಮ, ಮಂಜುನಾಥ್‌‌, ಶಿವಕುಮಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!