Saturday, October 17, 2026
Homeಕರಾವಳಿಕಾಸರಗೋಡುತಲಶ್ಶೇರಿಯಲ್ಲಿ ಚಲಿಸುವ ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿ; ಕೂದಲೆಳೆ ಅಂತರದಲ್ಲಿ ಪಾರು

ತಲಶ್ಶೇರಿಯಲ್ಲಿ ಚಲಿಸುವ ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿ; ಕೂದಲೆಳೆ ಅಂತರದಲ್ಲಿ ಪಾರು

- Advertisement -
- Advertisement -

ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿಯಲ್ಲಿ ವಿದ್ಯಾರ್ಥಿಗಳು ಬಸ್ಸಿಗೆ ಹತ್ತುತ್ತಿದ್ದಂತೆಯೇ ಚಾಲಕ ಬಸ್ ಚಲಾಯಿಸಿದ ಪರಿಣಾಮ, ವಿದ್ಯಾರ್ಥಿನಿಯೊಬ್ಬಳು ಫುಟ್‌ಬೋರ್ಡ್‌ನಿಂದ ಕೆಳಕ್ಕೆ ಬಿದ್ದ ಘಟನೆ ನಡೆದಿದೆ.

ತಲಶ್ಶೇರಿ ಸಹಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಈ ಘಟನೆ ಸಂಭವಿಸಿದೆ. ವಿದ್ಯಾರ್ಥಿಗಳು ಬಸ್ಸಿಗೆ ಹತ್ತುತ್ತಿದ್ದ ವೇಳೆ ಬಸ್ ಚಲಿಸಲು ಆರಂಭಿಸಿದ್ದು, ಇನ್ನೂ ಫುಟ್‌ಬೋರ್ಡ್‌ನಲ್ಲಿದ್ದ ವಿದ್ಯಾರ್ಥಿನಿ ಸಮತೋಲನ ಕಳೆದುಕೊಂಡು ರಸ್ತೆಗೆ ಬಿದ್ದಿದ್ದಾಳೆ.

ವಿದ್ಯಾರ್ಥಿನಿ ಗಂಭೀರ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆ ಪ್ರಯಾಣಿಕರ ಸುರಕ್ಷತೆಯ ಕುರಿತು ಆತಂಕ ಮೂಡಿಸಿದ್ದು, ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಸ್ಸಿನೊಳಗೆ ಹತ್ತಿದ ಬಳಿಕವೇ ಬಸ್ ಚಲಿಸುವಂತೆ ಚಾಲಕರು ಎಚ್ಚರಿಕೆ ವಹಿಸಬೇಕೆಂಬ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

- Advertisement -

Latest News

error: Content is protected !!