Thursday, June 4, 2026
Homeತಾಜಾ ಸುದ್ದಿಪುಣೆಯಲ್ಲಿ ಭೀಕರ ಅಗ್ನಿ ಅವಘಡ; 17 ಕಾರ್ಮಿಕರ ಸಾವು, ಹಲವರು ನಾಪತ್ತೆ

ಪುಣೆಯಲ್ಲಿ ಭೀಕರ ಅಗ್ನಿ ಅವಘಡ; 17 ಕಾರ್ಮಿಕರ ಸಾವು, ಹಲವರು ನಾಪತ್ತೆ

- Advertisement -
- Advertisement -

ಪುಣೆ: ಖಾಸಗಿ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ, ಕನಿಷ್ಠ 17 ಜನ ಸಜೀವದಹನವಾಗಿ 10ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯ ಘೋಟವಾಡ ಫಾಟಾ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.

ಪುಣೆ ಅಗ್ನಿಶಾಮಕ ದಳದ ಮಾಹಿತಿಯಂತೆ ಈವರೆಗೆ 17 ದೇಹಗಳನ್ನು ಹೊರತೆಗೆಯಲಾಗಿದೆ. ಈ ಪೈಕಿ 15 ಮಂದಿ ಮಹಿಳೆಯರು, ಇಬ್ಬರು ಪುರುಷರ ಮೃತದೇಹಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಬೆಂಕಿ ನಂದಿಸವ ಕಾರ್ಯಾಚರಣೆ ಮುಂದುವರೆದಿದೆ.

ಮೂಲಗಳ ಪ್ರಕಾರ ಘಟನೆ ನಡೆದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ 37 ಮಂದಿ ಕಾರ್ಮಿಕರು ಇದ್ದರು ಎಂದು ಹೇಳಲಾಗಿದೆ.

- Advertisement -

Latest News

error: Content is protected !!